ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್

ರಾಯಚೂರು ಮೇ ೧೪
ನಗರದಲ್ಲಿ ಮುನ್ನೂರು ಕಾಪು ಸಮಾಜದ ವತಿಯಿಂದ ಕಾರುಹುಣ್ಣಿಮೆ ಪ್ರಯುಕ್ತ ಟೆನ್ನಿಸ್ ಬಾಲ್ ಕ್ರಿಕೆಟ್ ಟುರ್ನಮೆಂಟ್ ಆಯೋಜಿಸಲಾಗಿದೆ.
ಕ್ರಿಕೆಟ್ ಟುರ್ನಮೆಂಟ್ ನ್ನು ಮಾಜಿ ಶಾಸಕರು, ಮುನ್ನೂರು ಕಾಪು ಸಮಾಜದ ಹಿರಿಯ ಮುಖಂಡರಾದ ಎ. ಪಾಪರೆಡ್ಡಿ ಯವರು ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಪುಂಡ್ಲ ನರಸರೆಡ್ಡಿಯವರ ನೆನಪಿಗಾಗಿ Pಓಖ ಫೌಂಡೇಶನ್ ವತಿಯಿಂದ ಪುಂಡ್ಲ ರಾಜೇಂದ್ರ ರೆಡ್ಡಿಯವರು ಕ್ರಿಕೆಟ್ ಟೂರ್ನಮೆಂಟ್ ಗೆ ೩೦ಸಾವಿರ ದೇಣಿಗೆಯನ್ನು ನೀಡಿದರು.
ಸದರಿ ಚಾಲನೆ ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ಎನ್ ಶ್ರೀನಿವಾಸ್ ರೆಡ್ಡಿ ಬಿ. ತಿಮ್ಮರೆಡ್ಡಿ, ಪಿ. ಶ್ರೀನಿವಾಸ್ ರೆಡ್ಡಿ, ಜಿ. ತಿಮ್ಮರೆಡ್ಡಿ, ಜಿ. ಮಹೇಂದ್ರರೆಡ್ಡಿ ಸೇರಿದಂತೆ ಪಿ. ರಾಜೇಂದ್ರ ರೆಡ್ಡಿ, ಜಿ. ಶೇಖರ್ ರೆಡ್ಡಿ, ವೈ, ಗೋಪಾಲ್ ರೆಡ್ಡಿ, ಜಿ. ನರಸಾರೆಡ್ಡಿ, ಬಿ. ರಾಘವೇಂದ್ರ ರೆಡ್ಡಿ ಉಪಸ್ಥಿತರಿದ್ದರು.
ಟುರ್ನಮೆಂಟ್ ವ್ಯವಸ್ಥಾಪಕರಾದ ಜಿ ವಿರೇಶ್ ರೆಡ್ಡಿ, ಜಿ. ನರೇಶ್ ರೆಡ್ಡಿ, ಪಿ, ಮಹೇಂದ್ರ ರೆಡ್ಡಿ ಜೊತೆಗಿದ್ದರು.