ಟೆನಿಸ್ ಸಿಂಗಲ್ಸ್: ರಾಮಕುಮಾರ,ಪಿಚ್ಲರ್ ಫೈನಲ್‍ಗೆ

ಕಲಬುರಗಿ,ಡಿ 2: ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಇಂದು ನಡೆದ ಐಟಿಎಫ್ ಓಪನ್-2023 ಪುರುಷರ ಸಿಂಗಲ್ಸ್ ಸೆಮಿ ಪೈನಲ್ ಪಂದ್ಯದಲ್ಲಿ ಭಾರತದ ರಾಮಕುಮಾರ ರಾಮನಾಥನ್ ಅವರು ಜಪಾನಿನ ಟಗೂಚಿ ರೊಟಾರೋ ಅವರನ್ನು 6-2, 6-1 ಸೆಟ್ ನಿಂದ ಸೋಲಿಸಿ ಫೈನಲ್ ಪ್ರವೇಶಿಸಿದರು.
ಕೋರ್ಟ್-3 ರಲ್ಲಿ ನಡೆದ ಮತ್ತೊಂದು ಸೆಮಿ ಫೈನಲ್ ಪಂದ್ಯದಲ್ಲಿ ಡೇವಿಡ್ ಪಿಚ್ಲರ್ (ಆಸ್ಟ್ರಿಯನ್) ಅವರು ಮತ್ಸುದಾ ರ್ಯೂಕಿ (ಜಪಾನ್) ಅವರನ್ನು 6-2, 6-4 ಅಂತರದಿಂದ ಸೋಲಿಸಿ ಫೈನಲ್‍ಗೆ ಲಗ್ಗೆ ಇಟ್ಟರು.
ರಾಮಕುಮಾರ ರಾಮನಾಥನ್ ಮತ್ತು ಡೇವಿಡ್ ಪಿಚ್ಲರ್ ಅವರ ನಡುವಿನ ಸಿಂಗಲ್ಸ್ ಫೈಸನಲ್ ಪಂದ್ಯ ನಾಳೆ ನಡೆಯಲಿದೆ.