ಟೆನಿಸ್ ಪಂದ್ಯಾವಳಿ ವಿಜೇತರಿಗೆ ಬಹುಮಾನ

ರಾಯಚೂರು,ಮಾ.೨೮- ನಗರ ಟೆನ್ನಿಸ್ ಅಸೋಸಿಯೆಶನ್ ವತಿಯಿಂದ ಮಾ. ೨೫ ರಿಂದ ೨೬ ವರೆಗೂ ನಡೆದ ಫ್ಯಾಮಿಲಿ ಕ್ಲಬ್, ಆವರಣ ಮತ್ತು ಜಿಲ್ಲಾ ಕ್ರೀಡಾಂಗಣದ ಟೆನ್ನಿಸ್ ಅಂಕಣದಲ್ಲಿ ನಡೆದ ಅಹ್ವಾನಿತ ಮುಕ್ತ ಟೆನ್ನಿಸ್ ಪಂದ್ಯಾವಳಿಯಲ್ಲಿ ರಾಯಚೂರ ನಗರ ಸೇರಿದಂತೆ ರಾಜ್ಯದ ವಿವಿಧ ಕಡೆಯಿಂದ ಸುಮಾರು ೨೦೦ ಕ್ರೀಡಾಪಟುಗಳೂ ಭಾಗವಹಿಸಿದ್ದರು.
ನಗರದ ಜನಪ್ರತಿನಿದಿನಗಳು ವ್ಯಾಪಾರಸ್ಥರು, ಕೈಗಾರಿಕೊದ್ಯಮಿಗಳು, ಖಾಸಗಿ ಹೋಟೆಲ್ ಮಾಲೀಕರು, ಆಸ್ಪತ್ರೆಯವರು ಇನ್ನೂ ಅನೇಕರ ಸಹಾಯ ಸಹಕಾರದಿಂದ ದೊಡ್ಡ ಪ್ರಮಾಣದಲ್ಲಿ ಟೆನ್ನಿಸ್ ಪಂದ್ಯಾವಳಿಯನ್ನು ಕಲ್ಯಾಣ ಕರ್ನಾಟಕ ಮಟ್ಟದಲ್ಲಿ ಏರ್ಪಡಿಸಲು ಸಾಧ್ಯವಾಯಿತು.
ಟೆನ್ನಿಸ್ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಟ್ರೋಫಿ ಮತ್ತು ನಗದು ಬಹುಮಾನ ವಿತರಿಸಲಾಯಿತು.