ಟೆಕ್-ರೇಡಿಯನ್ಸ್ ಸ್ಪರ್ಧೆಯಲ್ಲಿ ಅಪ್ಪಾ ಪಬ್ಲಿಕ್ ಶಾಲೆಯ ಉತ್ತಮ ಪ್ರದರ್ಶನ

ಕಲಬುರಗಿ:ಎ.20:ಏ.15 ಮತ್ತು 16 ರಂದು ರಾಷ್ಟ್ರಮಟ್ಟದ 7ನೇ ಆವರ್ತಿಯ ಟೆಕ್-ರೇಡಿಯನ್ಸ್ ಪೈಥಾನ್ ಪೆÇ್ರೀಗ್ರಾಮ್ಮಿಂಗ್ ಲ್ಯಾಂಗ್ವೇಜ್ ಹಾಗೂ ಕೋಡಿಂಗ್ ಹ್ಯಾಕಥಾನ್ ವಿಷಯದಲ್ಲಿ ಸ್ಪರ್ಧೆಯನ್ನು ಐಐಟಿ ಹೈದ್ರಾಬಾದ್ ನಲ್ಲಿ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಅಪ್ಪಾ ಪಬ್ಲಿಕ್ ಶಾಲೆಯ 15 ವಿಧ್ಯರ್ಥಿಗಳು ಪಾಲ್ಗೊಂಡು, ಎರಡನೆಯ ಸ್ಥಾನದೊಂದಿಗೆ ಇನ್ನೆರಡು ಪ್ರಶಸ್ತಿಯನ್ನು ಪಡೆದು ಶಾಲೆಯ ಕೀರ್ತಿಗೆ ಪಾತ್ರರಾಗಿದ್ದಾರೆ.

ಈ ಸ್ಪರ್ಧೆಯನ್ನು ಎರಡು ಸುತ್ತುಗಳಲ್ಲಿ ಆಯೋಜಿಸಲಾಗಿತ್ತು. ಮೊದಲನೆಯ ಪ್ರಾಂತೀಯ ಸುತ್ತು ಅಪ್ಪಾ ಪಬ್ಲಿಕ್ ಶಾಲೆಯಲ್ಲಿ ಸೆಪ್ಟೆಂಬರ್ 15 & 16ರಂದು ನೆಡೆಸಲಾಗಿತ್ತು. ಈ ಸುತ್ತಿನಲ್ಲಿ ಜಿಲ್ಲಾದ್ಯಂತ 125 ವಿದ್ಯಾರ್ಥಿಗಳು ಭಾಗವಹಿಸಿದ್ದರು. ನಿರ್ಣಾಯಕರಾಗಿ ಐಐಟಿ-ಹೈದ್ರಾಬಾದ್ ನಿಂದ ಆಗಮಿಸಿದ ವಿಷಯ ಪರಿಣಿತರು 62 ವಿದ್ಯಾರ್ಥಿಗಳನ್ನು ಎರಡನೆಯ ಸುತ್ತಿಗೆ ಆಯ್ಕೆ ಮಾಡಿದರು. ಇದರಲ್ಲಿ 15 ಸ್ಪರ್ಧಾಳುಗಳು ಅಪ್ಪಾ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಾಗಿದ್ದು, ಹೈದ್ರಾಬಾದ್ ನಲ್ಲಿ ನೆಡದ ಎರಡನೆಯ ಸುತ್ತಿನಲ್ಲಿಯೂ ಉತ್ತಮ ಪ್ರದರ್ಶನ ನೀಡಿದರು. ವಿದ್ಯಾರ್ಥಿಗಳ ಶ್ರಮದೊಂದಿಗೆ ಮಾರ್ಗದರ್ಶಕರು ನೀಡಿದ ತರಬೇತಿಯಿಂದ ಈ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಎರಡನೆಯ ಸ್ಥಾನ ಪಡೆಯುವುದರಲ್ಲಿ ಯೆಶಸ್ವಿಯಾದರು.

ಅಪ್ಪಾ ಪಬ್ಲಿಕ್ ಶಾಲೆಯ 12ನೆಯ ತರಗತಿಯ ವಿದ್ಯಾರ್ಥಿಗಳಾದ ಕುಮಾರ ಕುಶಾಲ್ ಪಾಟೀಲ್, ಕುಮಾರ ಅಗ್ರಜ ದೀಕ್ಷಿತ್ ಹಾಗು ಕುಮಾರ ಸುದೀಪ್ ಪೂಜಾರಿ ದ್ವಿತೀಯ ಸ್ಥಾನ ತಮ್ಮದಾಗಿಸಿಕೊಂಡರು. ತಂಡದ ಶ್ರೇಷ್ಠ ನಿರ್ವಹಣೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಆಯೋಜಕರು ಅಪ್ಪಾ ಪಬ್ಲಿಕ್ ಶಾಲೆಗೆ “ಅತ್ಯುತ್ತಮ ತಂಡ” ಪ್ರಶಸ್ತಿ ನೀಡಿ ಗೌರವಯಿಸಿದರೆ, ಶಾಲೆಯ ಐಟಿ ಶಿಕ್ಷಕರಾದ ಶ್ರೀ ರೇವಣಸಿದ್ಧ ಚಿನ್ಮಯಗಿರಿ ಇವರು “ಉತ್ತಮ ಸಂಪನ್ಮೂಲ ವ್ಯಕ್ತಿ” ಮತ್ತು ಉತ್ತಮ ಸಂಯೋಜಕರ” ಪ್ರಶಸ್ತಿಗೆ ಭಾಜನರಾದರು.

ಪೂಜ್ಯ ಡಾ. ಶರಣಬಸವಪ್ಪ ಅಪ್ಪಾ, ಅಧ್ಯಕ್ಷರು & ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ. ಅಪ್ಪಾ , ಚೇರ್ ಪರ್ಸನ್, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ಇವರು ವಿದ್ಯಾರ್ಥಿಗಳ ಸಾಧನೆ ಮೆಚ್ಚಿ ಅಭಿನಂದಿಸಿದರು. ಮಾರ್ಗದರ್ಶಕರಾದ ಶ್ರೀ ಏನ್. ಎಸ. ದೇವರ್ಕಲ್, ಶಾಲೆಯ ಪ್ರಾಚಾರ್ಯರು, ಶಿಕ್ಷಕ ವೃಂದದವರು ಮತ್ತು ಶಿಕ್ಷಕೇತರ ವೃಂದದವರು ವಿಜೇತ ವಿದ್ಯಾರ್ಥಿಗಳಿಗೆ ಮತ್ತು ತಂಡದ ನಿರ್ವಹಣೆಕಾರರಾದ ಶ್ರೀ ರೇವಣಸಿದ್ಧ ಚಿನ್ಮಯಗಿರಿ ಇವರಿಗೆ ಶುಭ ಕೋರಿದರು.