ಟೆಕ್-ಉತ್ಸವ 2024: ಹೊಸತನ ಮತ್ತು ಸೃಜನಶೀಲತೆಯ ಸಂಭ್ರಮಾಚರಣೆ

ಸಂಜೆವಾಣಿ ವಾರ್ತೆ

ದಾವಣಗೆರೆ.ಮಾ.೩; ನಗರದ  ಜಿಎಂ ತಾಂತ್ರಿಕ ಮಹಾವಿಶ್ವವಿದ್ಯಾಲಯದಲ್ಲಿ ಫೆಬ್ರವರಿ 29, 2024 ರಂದು ‘ಟೆಕ್-ಉತ್ಸವ’ ಎಂಬ ಬೃಹತ್ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಉದ್ಘಾಟಿಸಲು ಡಾ. ಬಸವರಾಜಪ್ಪ ಎಸ್, ಫಾರ್ಮರ್ ರಿಜಿಸ್ಟ್ರಾರ್ ಐಐಐಟಿ ಧಾರವಾಡ್ ಮತ್ತು ಐಐಟಿ ಧಾರವಾಡ್ ಇವರು ಆಗಮಿಸಿದ್ಧರು. ಅವರು ತಮ್ಮ ಭಾಷಣದಲ್ಲಿ ಕೇವಲ ಅಂಕಗಳಿಗಿಂತ ಸೃಜನಶೀಲತೆ ಮತ್ತು ಜೀವ ಕಲಿಕೆಯ ಮಹತ್ವವನ್ನು ವಿದ್ಯಾಥಿಗಳಿಗೆ ಜ್ಞಾನಾರ್ಜನೆಯ ಬೆಳವಣಿಗೆಗಳ ಮಹತ್ವವನ್ನು ಮೂಡಿಸಿದರು. ದೈನಂದಿನ ಜ್ಞಾನ ಗಳಿಕೆಯ ಶಕ್ತಿ ಮತ್ತು ರೊಬೋಟುಗಳ ಅಭಿವೃದ್ಧಿ ಮತ್ತು ಬಳಕೆಯ ಸುತ್ತಲಿನ ನೈತಿಕ ಪರಿಸರಗಳ ಅಗತ್ಯವನ್ನು ಕಲಿಕೆಯ ಮಹತ್ವಿಕೆಯಿಂದ ತಿಳಿಸಿದರು. ಆತ್ಯಾಧುನಿಕ ತಂತ್ರಜ್ಞಾನಗಳನ್ನು ಪ್ರದರ್ಶಿಸುವಾಗ, ಸೃಜನಶೀಲತೆ ಮತ್ತು ಹೊರಗಿನ ಚಿಂತನೆಗಳ ಬಗ್ಗೆ ಅಧ್ಯಯನ ಮಾಡುವುದು ಇದರ ಮಹತ್ವದ ಉದ್ಧೇಶವಾಗಿದ್ದು ಇದರಿಂದ ವಿದ್ಯಾರ್ಥಿಗಳನ್ನು ಉತ್ತೇಜಿಸಲು ವಿವಿಧ ಬಗೆಯ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಗಳು ಯಾವುಗಳೆಂದರೆ ರೋಬೋ ರೇಸ್, ಲೈನ್ ಫಾಲೋವರ್, ಟೆಕ್ ಪೇಂಟ್, ಐಡಿಯಾಥಾನ್, ಕ್ಯಾಡ್ ಮಾಡೆಲಿಂಗ್ ಮತ್ತು ವಿಕ್ಟರಿ-ವಿಪೋರ್ ನಂತಹ ತಾಂತ್ರಿಕ ಹಾಗೂ ರೋಮಾಂಚಕಾರಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಈ ಕಾರ್ಯಗಾರವನ್ನು ಡಿಪ್ಲೊಮಾ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೇ ಪ್ರವೇಶಾತಿಯನ್ನು ಕೊಡಲಾಗಿತ್ತು. ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಆಗಮಿಸಿದ್ದು ಅವರುಗಳು ವಿವಿಧ ಬಗೆಯ ಸ್ಪರ್ಧೆಗಳ ಕಾರ್ಯಕ್ರಮಕ್ಕೆ ಅಗತ್ಯವಾಗಿರುವಂತಹ ಪ್ರದರ್ಶನವನ್ನು ಯಶಸ್ವಿಯಾಗಿ ನೆರವೇರಿಸಿಕೊಟ್ಟರು. ವಿದ್ಯಾರ್ಥಿಗಳ ಸಿದ್ಧಾಂತ ಮತ್ತು ಅಭ್ಯಾಸಗಳ ನಡುವಿನ ಅಂತರವನ್ನು ಕಡಿಮೆ ಮಾಡುವ, ನಾವೀನ್ಯತೆಯನ್ನು ಉತ್ತೇಜಿಸುವ, ಉದ್ಯೋಗಾರ್ಹತೆಯನ್ನು ಹೆಚ್ಚಿಸುವ ಮತ್ತು ಆತ್ಮವಿಶ್ವಾಸ ಮತ್ತು ಉತ್ಸಾಹವನ್ನು ಹೆಚ್ಚಿಸುವ ಮೂಲಕ ಭವಿಷ್ಯದ ಎಂಜಿನಿಯರುಗಳನ್ನು ರೂಪಿಸುವಲ್ಲಿ ಈ ತರಹವಾದ ಟೆಕ್-ಉತ್ಸವದ ಕಾರ್ಯಾಗಾರಗಳು ಪೂರಕವಾಗುತ್ತವೆ ಎಂದು  ಕಾರ್ಯಕ್ರಮದ ಅತಿಥಿಗಳು ತಿಳಿಹೇಳಿದರು.  ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಜಯ್ ಪಾಂಡೆ ಎಂ ಬಿ ಅವರು ವಿದ್ಯಾರ್ಥಿಗಳಿಗೆ ತಮ್ಮ ಜೀವನದಲ್ಲಿ ಯಶಸ್ವಿಯಾಗಲು ಬಗೆ ಬಗೆಯ   ತಂತ್ರಜ್ಞಾನದ ಕೌಶಲ್ಯಗಳ ಅನುಭವಗಳನ್ನು, ವಿವಿಧ ಬಗೆಯ ಉತ್ತೇಜನಕಾರಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ವಿದ್ಯಾರ್ಥಿ ಜೀವನದ ಮಹತ್ವದ ಉದ್ದೇಶವಾಗಿರಬೇಕೆಂದು ತಿಳಿಸಿದರು. ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮಗಳು ಮಹತ್ವಕಾರಿ ಕೌಶಲ್ಯ ತರಬೇತಿ ನೀಡುವುದಾಗಿದೆ  ಎಂದು ಕಾರ್ಯಕ್ರಮದ ಸಂಯೋಜಕರಾದ ಡಾ. ಮುದಸ್ಸರ್ ಪಾಶಾ ತಿಳಿಸಿದರು. ಟೆಕ್-ಉತ್ಸವದ ಸದುಪಯೋಗವನ್ನು ಪಡೆದುಕೊಂಡು ವಿದ್ಯಾರ್ಥಿಗಳು ಜೀವನದಲ್ಲಿ ಹೇಗೆ ತಮ್ಮ ಭವಿಶ್ಯವನ್ನು ರೂಪಿಸಿ ಕೊಳ್ಳಬಹುದು  ಎಂಬುದರ ಬಗ್ಗೆ ರೋಬೊಟಿಕ್ಸ್ ಮತ್ತು ಆಟೊಮೇಷನ್ ವಿಭಾಗದ ಪ್ರಾಧ್ಯಾಪಕರದ ಡಾ. ರಾಜಕುಮಾರ್ ಡಿ. ಜಿ. ಅವರು ತಿಳಿಸಿದರು. ಈ ಕಾರ್ಯಕ್ರಮವನ್ನು ಉದ್ಯೋಗ ಮತ್ತು ತರಬೇತಿ ಮುಖ್ಯಸ್ಥರಾದ ತೇಜಸ್ವಿ ಕಟ್ಟಿಮನಿ ಅವರ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ ಇನ್ನಿತರ ವಿಭಾಗದ ಪ್ರಾಧ್ಯಾಪಕರುಗಳು ಮತ್ತು ಭೋದಕ ಭೋದಕೇತರ ಸಿಬ್ಬಂದಿಗಳು  ಹಾಜರಿದ್ದರು.