ಟೆಕ್ಸ್ ಟೈಲ್ ಮಹಿಳೆಯರ ಸ್ವ ಉದ್ಯೋಗಕ್ಕೆ ಅವಕಾಶ

ಸಂಡೂರು: ಮಾ:31: ಟೆಕ್ಸ್ ಟೈಲ್ ಪಾರ್ಕನ್ನು ತಾಲೂಕಿನಲ್ಲಿ ಸ್ಥಾಪಿಸುವ ಮೂಲಕ ಎಲ್ಲಾ ಮಹಿಳೆಯರಿಗೆ ಸ್ವ ಉದ್ಯೋಗಕ್ಕೆ ಅವಕಾಶ ಮಾಡಿಕೊಡುವಂತಹ ಮಹತ್ತರ ಯೋಜನೆಯನ್ನು ಮಾಡಲಾಗುವುದು, ಅದ್ದರಿಂದ ಈಗ ಕಲಿತ ಟೈಲರಿಂಗ ಪೂರ್ಣ ಸದುಪಯೋಗವಾಗಲಿದೆ ಎಂದು ಶಾಸಕ ಈ.ತುಕರಾಂ ತಿಳಿಸಿದರು.
ಅವರು ಇಂದು ತಾಲೂಕಿನ ತಾರಾನಗರ ಗ್ರಾಮ ಪಂಚಾಯಿತಿ, ತಾಳೂರು ಗ್ರಾಮ ಪಂಚಾಯಿತಿಯಲ್ಲಿ ಜಿಲ್ಲಾ ಖನಿಜ ನಿಧಿ ಅಡಿಯಲ್ಲಿ ಮಹಿಳೆಯರಿಗೆ ತರಬೇತಿ ನೀಡಿ ಉಚಿತ ಹೊಲಿಗೆ ಯಂತ್ರ ನೀಡಿ ಮಾತನಾಡಿ ಮಹಿಳೆಯರ ಸಬಲೀಕರಣವೆಂದರೆ ಅದು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪ್ರಗತಿಗೆ ನಾಂದಿಹಾಸುವುದಾಗಿದೆ, ಅ ಕಾರ್ಯವನ್ನು ಜಿಲ್ಲಾ ಖನಿಜ ನಿಧಿಯ ಮೂಲಕ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಯಲ್ಲಿ ಮಹಿಳೆಯರಿಗೆ ತರಬೇತಿ ನೀಡಿ ಅ ಕಾರ್ಯಕ್ಕೆ ತಕ್ಕ ಯಂತ್ರಗಳನ್ನು ನೀಡುತ್ತಿದ್ದು ಅದರ ಪೂರ್ಣ ಸದುಪಯೋಗವನ್ನು ಮಹಿಳೆಯರು ಪಡೆದುಕೊಳ್ಳಬೇಕು ಈ ಯೋಜನೆಯನ್ನು ಹಿಂದಿನ ಜಿಲ್ಲಾಧಿಕಾರಿ ನಕುಲ್, ಸಿ.ಇ.ಓ ನಂದಿನಿ, ಇಂದಿನ ಜಿಲ್ಲಾಧಿಕಾರಿಗಳ ಪೂರ್ಣ ಶ್ರಮದೊಂದಿಗೆ ಈ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು ಅದರ ಪೂರ್ಣ ಸದುಪಯೋಗವನ್ನು ಮಹಿಳೆಯರು ಪಡೆದುಕೊಳ್ಳುವ ಮೂಲಕ ಅರ್ಥಿಕ ಸಬಲತೆ ಹೊಂದುವುದರ ಜೊತೆಗೆ ಮಕ್ಕಳ ಶಿಕ್ಷಣಕ್ಕೆ ಅದ್ಯತೆಯನ್ನು ಕೊಡಬೇಕು, ಸಂಡೂರಿನಿಂದ ಓಡಾಡಲು ಕಷ್ಟಸಾಧ್ಯವಾದ ಸಂದರ್ಭದಲ್ಲಿ ಇಂದು ಸಮಗ್ರ ರಸ್ತೆ ಅಭಿವೃದ್ದಿ ಶಿಕ್ಷಣಕ್ಕೆ ವಸತಿ ಶಾಲೆಗಳನ್ನು, ರಸ್ತೆ, ಚರಂಡಿ ನಿರ್ಮಾಣ ಮಾಡುವ ಮೂಲಕ ಕಟ್ಟಿಗೆ ಹೊತ್ತು ಬದುಕು ಸಾಗಿಸುವ ಮಹಿಳೆಯರು ಇಂದು ಸ್ವಾವಲಂಬಿಗಳಾಗಿ ಮನೆಯಲ್ಲಿಯೇ ಕೆಲಸ ಮಾಡುವಂತೆ ಮಾಡಲಾಗುತ್ತಿದೆ, ಅಲ್ಲದೆ ಮಹಿಳೆಯರು ಇಡೀ ಕುಟುಂಬವನ್ನು ರಕ್ಷಿಸುವಂತಹ ಮಹತ್ತರ ಕಾರ್ಯವನ್ನು ಮಾಡುತ್ತಾರೆ, ಕಾರಣ ಶಿಕ್ಷಣದ ಪ್ರಗತಿಗೆ, ಕುಟುಂಬದ ಅಪತ್ತಿನಲ್ಲಿ ರಕ್ಷಿಸುವಂತಹ ಕಾರ್ಯ ನಡೆಯುತ್ತದೆ, ಅದಕ್ಕೆ ಈ ಸ್ವ ಉದ್ಯೋಗ ಪೂರಕವಾಗಲಿದೆ, ತಾಲೂಕಿನಾದ್ಯಂತ ಶಿಕ್ಷಣದ ಪ್ರಗತಿಗೆ ವಸತಿಶಾಲೆಗಳನ್ನು, ವಿಠ್ಠಲಾಪುರಕ್ಕೆ ಪಿ.ಯು. ಕಾಲೇಜನ್ನು ಪ್ರಾರಂಭಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ತಾರಾನಗರ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಹಾಗೂ ತಾಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಫಲಾನುಭವಿಗಳು ಉಪಸ್ಥಿತರಿದ್ದರು.
ತಾಲೂಕು ಪಂಚಾಯಿತಿ ಸದಸ್ಯರಾದ ಮೇಘನಾಥ ಅವರು ಸಹ ಈ ಕಾರ್ಯಕ್ರಮ ಉತ್ತಮವಾದುದು ನಿರಂತರವಾಗಿ ನಡೆಯಬೇಕು ಎಂದರು. ತಾಲೂಕು ಪಂಚಾಯಿತಿ ಕಾರ್ಯಾನಿರ್ವಾಹಕ ಅಧಿಕಾರಿ ಕೆ.ಅರ್. ಪ್ರಕಾಶ್, ತಹಶೀಲ್ದಾರ್ ಹೆಚ್.ಜಿ. ರಶ್ಮಿ, ಪಿ.ಡಿ.ಓಗಳು, ಇತರ ಅಧಿಕಾರಿಗಳು ಉಪಸ್ಥಿತರಿದ್ದರು.