ಟೆಕ್ಸಾಸ್ (ಅಮೆರಿಕಾ), ಎ.೨೪- ಹೈಸ್ಕೂಲ್‌ನಲ್ಲಿ ನಡೆಯುತ್ತಿದ್ದ ಪಾರ್ಟಿ ವೇಳೆ ನಡೆದ ಶೂಟೌಟ್‌ನಲ್ಲಿ ಒಂಬತ್ತು ಮಂದಿ ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಟೆಕ್ಸಾಸ್‌ನ ಜಾಸ್ಪರ್‌ನಲ್ಲಿ ನಡೆದಿದೆ. ಸದ್ಯ ಘಟನಾ ಸ್ಥಳದಲ್ಲಿ ಒಂದು ವಾರಗಳ ಕಾಲ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲು ನಿರ್ಧರಿಸಲಾಗಿದೆ.
ಟೆಕ್ಸಾಸ್‌ನ ಜಾಸ್ಪರ್‌ನಲ್ಲಿ ಹೈಸ್ಕೂಲ್‌ನ ಕಾರ್ಯಕ್ರಮವನ್ನು ಶನಿವಾರ ತಡರಾತ್ರಿ ಚರ್ಚ್‌ನ ಮೀಟಿಂಗ್ ಹಾಲ್‌ನಲ್ಲಿ ನಡೆಸಲಾಗಿತ್ತು. ಈ ವೇಳೆ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಒಂಬತ್ತು ಮಂದಿ ವಿದ್ಯಾರ್ಥಿಗಳು ಗಾಯಗೊಂಡಿದ್ದು, ಆದರೆ ಅದೃಷ್ಟವಶಾತ್ ಯಾರೊಬ್ಬರು ಗಂಭೀರ ರೀತಿಯಲ್ಲಿ ಗಾಯಗೊಂಡಿಲ್ಲ ಎನ್ನಲಾಗಿದೆ. ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಜಾಸ್ಪರ್‌ನ ಪೊಲೀಸ್ ಅಧಿಕಾರಿಯೊಬ್ಬರು, ಘಟನೆಯಲ್ಲಿ ಗಾಯಗೊಂಡವರನ್ನು ಜಾಸ್ಪರ್ ಮೆಮೋರಿಯಲ್ ಆಸ್ಪತ್ರೆ ಹಾಗೂ ಬ್ಯೂಮೊಂಟ್‌ನಲ್ಲಿರುವ ಸೈಂಟ್ ಎಲಿಜಬೆತ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶೂಟೌಟ್‌ನ ತನಿಖೆ ಮುಂದುವರೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿಗಳ ವಿಚಾರಣೆ ನಡೆಸಲಾಗುತ್ತಿದೆ. ಪಾರ್ಟಿಯಲ್ಲಿ ಸುಮಾರು ೨೫೦ ಮಂದಿ ಭಾಗಿಯಾಗಿದ್ದರು ಎಂದು ತಿಳಿಸಿದ್ದಾರೆ.