ಟೆಕ್ಸಾಸ್‌ನಲ್ಲಿ ಬಿಸಿ ಗಾಳಿ ೧೩ ಮಂದಿ ಸಾವು

ವಾಷಿಂಗ್ಟನ್, ಜೂ.೨೯- ಅಮೇರಿಕಾದ ವಿವಿದ ರಾಜ್ಯಗಳು ಬಿಸಿಗಾಳಿ ಅಲೆಗೆ ತತ್ತರಿಸಿದ್ದು ಟೆಕ್ಸಾಸ್‌ನಲ್ಲಿ ಒಂದರಲ್ಲಿಯೇ ಇದುವರೆಗೆ ಕನಿಷ್ಠ ೧೩ ಮಂದಿ ಸಾವನ್ನಪ್ಪಿದ್ದಾರೆ. ಅಪಾಯಕಾರಿ ತಾಪಮಾನದ ಬಗ್ಗೆ ರಾಜ್ಯದ ಸರ್ಕಾರ ಎಚ್ಚರಿಕೆ ನೀಡಿದ್ದರೂ, ಬಿಸಿಗಾಳಿ ಶಾಖದ ಅಲೆ ಪೂರ್ವದ ಮಿಸಿಸಿಪ್ಪಿ ಮತ್ತು ಟೆನ್ನೆಸ್ಸಿಗೆ ವಿಸ್ತರಿಸಿದೆ. ಈ ಮಧ್ಯೆ, ಕ್ಯಾಲಿಫೋರ್ನಿಯಾದಲ್ಲಿ ಬಿಸಿದಾಳಿ ವರ್ಷದ ಮೊದಲ ಬಿಸಿಗಾಳಿ ಸಮಸ್ಯೆ ಎದುರಿಸುತ್ತಿದೆ. ಟೆಕ್ಸಾಸ್, ನ್ಯೂ ಮೆಕ್ಸಿಕೋ, ಅರಿಝೇನಾ, ಕೊಲೊರಾಡೋ ಮತ್ತು ಉತಾಹನ ಕೆಲವು ಭಾಗಗಳಲ್ಲಿ ಅಪಾಯಕಾರಿ ಅಲೆಗೆ ಶುಷ್ಕ, ಬಿಸಿ ಗಾಳಿಯ ಪರಿಸ್ಥಿತಿ ಹೆಚ್ಚಬಹುದು ಎಂದು ರಾಷ್ಟ್ರೀಯ ಹವಾಮಾನ ಸೇವೆ ಇಲಾಖೆ ಎಚ್ಚರಿಸಿದೆ.
ಆಗ್ನೇಯ ಭಾಗದಲ್ಲಿ ವಾರದ ಮಧ್ಯದ ತಾಪಮಾನವು ೩೮ ಡಿಗ್ರಿ ಸೆಲ್ಸಿಯಸ್ ಮೀರುತ್ತದೆ ಎಂದು ಮುನ್ಸೂಚನೆ ನೀಡಲಾಗಿದೆ. ಹೆಚ್ಚಿನ ಆದ್ರ್ರತೆಯು ಕೆಲವು ಪ್ರದೇಶಗಳಲ್ಲಿ ೪೬ ಸೆಲ್ಸಿಯಸ್ ಗಿಂತ ಹೆಚ್ಚಿನ ಬಿಸಿಗಾಳಿ ಹೊಂದಿದೆ.ಕಳೆದ ವಾರದಲ್ಲಿ ಟೆಕ್ಸಾಸ್‌ನಲ್ಲಿ ೩೮ ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದ ತಾಪಮಾನದಿಂದಾಗಿ ತೀವ್ರ ಆದ್ರ್ರತೆ ಎದುರಿಸುತ್ತಿದೆ.ಬಿಸಿಲಿನ ತಾಪದಿಂದ ಸಾರ್ವಜನಿಕರು ತತ್ತರಿಸುತ್ತಿದ್ದಂತೆ, ವಿದ್ಯುತ್ ಬಳಕೆ ಸಂಜೆ ೬ ಗಂಟೆಗೆ ೮೦,೮೨೮ ಮೆಗಾವ್ಯಾಟ್‌ಗೆ ತಲುಪಿದೆ ಎಂದು ಟೆಕ್ಸಾಸ್ ಎಲೆಕ್ಟಿಕ್ ರಿಲಯಬಿಲಿಟಿ ಕೌನ್ಸಿಲ್ ಹೇಳಿದೆ.
೨೦೨೨ರ ಜುಲೈ ೨೦ ರಂದು ತಲುಪಲಾಗಿದ್ದ ೮೦,೧೪೮ ಮೆಗಾವ್ಯಾಟ್‌ಗಳ ಗ್ರಿಡ್‌ನ ಹಿಂದಿನ ದಾಖಲೆ ಮೀರಿಸಿದ್ದು, ಮತ್ತೊಂದು ದಾಖಲೆ ಸ್ಥಾಪಿಸಲಾಗುವುದು ಎಂದು ಪ್ರಾಧಿಕಾ ಹೇಳಿದೆ.ಹೀಟ್‌ವೇವ್ ಹಿನ್ನೆಲೆ ದೇಶದ ಉಳಿದ ಭಾಗಗಳಲ್ಲಿ ಹೆಚ್ಚಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ಟೆಕ್ಸಾಸ್‌ನ ಜನ ತೀವ್ರವಾದ ಚಂಡಮಾರುತಗಳು ಮತ್ತು ಸುಂಟರ ಗಾಳಿ ಸೇರಿದಂತೆ ತೀವ್ರತರವಾದ ಶಾಖದ ಸಮಸ್ಯೆ ಎದುರಿಸುತ್ತಿದ್ದಾರೆ.ಕಳೆದ ಒಂದು ವಾರದವರೆಗೆ ಟೆಕ್ಸಾಸ್‌ನ ಮೇಲೆ ಪ್ರಭಾವ ಬೀರಿದ ಶಾಖದ ಅಲೆಯು ಉತ್ತರಕ್ಕೆ ಮತ್ತು ಪೂರ್ವಕ್ಕೆ ವಿಸ್ತರಿಸಲು ಸಿದ್ಧವಾಗಿದೆ. ಮುಂದಿನ ಆರು ದಿನಗಳಲ್ಲಿ ೧೫೦ ಕ್ಕೂ ಹೆಚ್ಚು ಶಾಖದ ದಾಖಲೆಗಳನ್ನು ಮುರಿಯಬಹುದು ಎಂದು ಮೆಂಫಿಸ್‌ನಲ್ಲಿರುವ ರಾಷ್ಟ್ರೀಯ ಹವಾಮಾನ ಇಲಾಖೆ ಎಚ್ಚರಿಸಿದೆ.