ಟೆಂಪೋ ಪಲ್ಟಿ: ಚಾಲಕ ಗಂಭೀರ

ಬೆಳಗ್ಗೆ ನಡೆದ ಅವಘಡ: ಪೊಲೀಸರಿಂದ ಪರಿಶೀಲನೆ

ಶಿರ್ವ, ಅ.೩೧- ಇಲ್ಲಿನ ಸೈಂಟ್ ಮೇರಿಸ್ ಶಾಲೆ ಸಮೀಪ ಕಲ್ಲು ಸಾಗಾಟದ ಟೆಂಪೋವೊಂದು ಪಲ್ಟಿಯಾಗಿ ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.

ಶಿರ್ವ ಕಡೆಯಿಂದ ಕಟಪಾಡಿ ಕಡೆಗೆ ಬರುತ್ತಿದ್ದ ಟೆಂಪೋ ಇಳಿಜಾರು ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಬಿತ್ತೆನ್ನಲಾಗಿದೆ. ಇದರಿಂದ ಟೆಂಪೋ ಚಾಲಕ ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.