ಟೆಂಪೊ- ಕಾರು ಡಿಕ್ಕಿ ೬ ಮಂದಿ ಸಾವು

ನವದೆಹಲಿ, ಜೂನ್ ೪-ಟೆಂಪೋ ಮತ್ತು ಕಾರಿನ ನಡುವೆ ತಡರಾತ್ರಿ ಅಪಘಾತ ಸಂಭವಿಸಿದ್ದು, ೬ ಜನ ಪ್ರಾಣ ಮೃತಪಟ್ಟಿದ್ದಾರೆ. ಆಗ್ರಾ ಜಿಲ್ಲೆಯ ಖೇರ್ ಘರ್ ಪೊಲೀಸ್ ಠಾಣೆ ವ್ಯಾಪ್ತಿಯ ಸೈಯಾನ್-ಖೇರ್ ಘರ್ ರಸ್ತೆಯಲ್ಲಿ ಸೋಮವಾರ ತಡರಾತ್ರಿ ಟೆಂಪೋ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. ಟೆಂಪೋದಲ್ಲಿದ್ದ ೬ ಮಂದಿ ಮೃತಪಟ್ಟಿದ್ದು, ೪ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಾರು ಚಾಲಕ ಪರಾರಿಯಾಗಿದ್ದು, ಆತನಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ತು ಜನರಿದ್ದ ಟೆಂಪೋವೊಂದು ಸಯಾನ್ ನಿಂದ ಖೇರ್ ಘರ್ ಗೆ ಹೋಗುತ್ತಿತ್ತು. ಈ ವೇಳೆ ಎದುರುಗಡೆಯಿಂದ ಬಂದ ಕಾರು ಟೆಂಪೋಗೆ ಡಿಕ್ಕಿ ಹೊಡೆದಿದೆ. ಖೇರ್ಗಢ ಪೊಲೀಸ್ ಠಾಣೆ ವ್ಯಾಪ್ತಿಯ ನಾಗಲಾ ಉದಯ ಗ್ರಾಮದ ನಿವಾಸಿ ಟೆಂಪೋ ಚಾಲಕ ಜಯಪ್ರಕಾಶ್, ಪತ್ನಿ ಬ್ರಜೇಶ್ದೇವಿ, ೧೨ ವರ್ಷದ ಮಗ ಸುಮಿತ್ ಮತ್ತು ವೃದ್ಧ ಬ್ರಜ್ ಮೋಹನ್ ಶರ್ಮಾ, ಭೋಲಾದ ಟೆಂಪೋ ಚಾಲಕ ಅಯೇಲಾ ಮತ್ತು ಖೇರ್ಗಢದ ಮನೋಜ್ (೩೦) ಮೃತಪಟ್ಟಿದ್ದಾರೆ. ಉಳಿದ ನಾಲ್ವರಿಗೆ ಎಸ್‌ಎನ್. ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಎಸಿಪಿ ಮಹೇಶ್ ಕುಮಾರ್ ತಿಳಿಸಿದ್ದಾರೆ.