ಟೆಂಡರ್ ಕಾಮಗಾರಿಯಲ್ಲಿ ಅವ್ಯವಹಾರ: ಯೋಜನಾ ನಿರ್ದೇಶಕರ ಅಮಾನತಿಗೆ ಒತ್ತಾಯ

ರಾಯಚೂರು.ಡಿ.೩-ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ವಿವಿದ ಯೋಜನೆಗಳ ಅಡಿಯಲ್ಲಿ ನಡೆದಿರುವ ಕಾಮಗಾರಿಗಳನ್ನು ಪರಿಶೀಲನೆ ಮಾಡುತ್ತಿರುವ ೩ನೇ ತಪಾಸಣಾ ಸಂಸ್ಥೆಯನ್ನು ಟೆಂಡರ ನಡೆಸದೇ ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರು ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಯ ಕರ್ನಾಟಕ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಸಿದರು.
ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಗಳಲ್ಲಿ ಕಾಮಗಾರಿ ನಡೆಯುತ್ತಿದ್ದೂ
ಹಣದ ಒಳಒಪ್ಪಂದದ ಮೇರೆಗೆ ಆದೇಶ ನೀಡಿರುವುದನ್ನು ರದ್ದುಪಡಿಸಬೇಕೆಂದು ಅವರು ಒತ್ತಾಯಿಸಿದರು.
ರಾಯಚೂರು ನಗರಸಭೆ, ಮನವಿ, ಸಿಂಧನೂರು ಮುದಗಲ್ ಸೇರಿದಂತೆ
ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ವಿವಿದ ಅನುದಾನಗಳ ಅಡಿಯಲ್ಲಿ ಎಸ್.ಎಫ್.ಸಿ. ಮು.ನಿ ಎಸ್.ಎಫ್.ಸಿ. ವಿಶೇಷ ಅನುದಾನ ಎಸ್.ಎಫ್.ಸಿ ಕುಡಿಯುವ ನೀರು ೧೪ನೇ ಹಣಕಾಸು ಸಾಮಾನ್ಯ ಮೂಲ ಅನುದಾನ, ೧೪ನೇ ಹಣಕಾಸು ಜನರಲ್ (ಬೇಸಿಕ್ ಅನುದಾನ ಕೆ.ಕೆ.ಆರ್.ಡಿ.ಬಿ, ನಗರಸಭೆ ನಿಧಿ ಮತ್ತು ಇತರೆ ಯೋಜನೆಗಳ ಎಲ್ಲಾ ಕಾಮಗಾರಿಗಳನ್ನು ತಾಂತ್ರಿಕವಾಗಿ ಪರಿಶೀಲನೆ ಮಾಡಿ ವರದಿ ನೀಡುವ ಸಂಬಂಧ ಈಗಾಗಲೇ ಟೆಂಡರ್ ಕರೆದು ಅವಧಿ ಮುಗಿದು ಸುಮಾರು ವರ್ಷಗಳು ಕಳೆದಿರುತ್ತದೆ ಎಂದು ಅವರು ಆರೋಪಿಸಿದರು.
ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ, ಅವರು ಟೆಂಡರ್ ಕರೆಯದೇ ರಾಯಚೂರು ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲರ ಜೊತೆ ಒಳಒಪ್ಪಂದ ಮಾಡಿಕೊಂಡು ಎಲ್ಲಾ ಕಾಮಗಾರಿಗಳ ಮತ್ತು ಸಾಮಾಗ್ರಿ ಪೂರೈಕೆಗಳಿಗೆ ೩ನೇ ಹಂತದ ತಪಾಸಣೆ ಏಜೆನ್ಸಿ ಆದೇಶವನ್ನು ನೀಡಿರುತ್ತಾರೆ ಎಂದು ಆರೋಪಿಸಿದರು.
ಇವರನ್ನು ಕೂಡಲೇ ವಜಾಗೊಳಿಸಬೇಕು ಎಂದು ಜಯ ಕರ್ನಾಟಕ ಜಿಲ್ಲಾಧ್ಯಕ್ಷ ಶಿವುಕುಮಾರ್ ಯಾದವ್ ಒತ್ತಾಯಿಸಿದರು.