ಟೆಂಡರ್ ಕರೆದು ಕಾಮಗಾರಿ ಆರಂಭಿಸಿ

ಔರಾದ್:ಸೆ.9:ಜಿಲ್ಲೆಯ ಔರಾದ ಮತ್ತು ಕಮಲನಗರ ತಾಲ್ಲೂಕಿನಲ್ಲಿ ಸರಕಾರದ ನಿಯಮ ಗಾಳಿಗೆ ತೂರಿ ಟೆಂಡರ ಕರೆಯಲಾರದೆ ಸಚಿವರ ನಿರ್ದೇಶನದಂತೆ ಭೂಮಿ ಪೂಜೆ ಮಾಡಿ ಕಾಮಗಾರಿ ಆರಂಭಿಸಲಾಗುತ್ತಿದೆ. ಇದು ಏ.ಖಿ.Pಖಿ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ ಎಂದು ಏಕ್ತಾ ಫೌಂಡೇಶನ್ ಸದಸ್ಯರು ಹಾಗೂ ಚಾಂದೋರಿ ಗ್ರಾಮ ಪಂಚಾಯಿತಿಯ ಹಾಲಿ ಸದಸ್ಯ ದೀಪಕ್ ಪಾಟೀಲ್ ಚಾಂದೋರಿ ಆರೋಪಿಸಿದ್ದಾರೆ.
ಈ ಕುರಿತು ಲೋಕೋಪಯೋಗಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗೆ ಬರೆದ ಮನವಿ ಪತ್ರವನ್ನು ಪ್ರಕಟಣೆಗೆ ಬಿಡುಗಡೆ ಮಾಡಿರುವ ಅವರು, ಔರಾದ ತಾಲ್ಲೂಕಿನಲ್ಲಿ ಬಹಳಷ್ಟು ಕಾಮಗಾರಿಗಳು ನಿಂತರವಾಗಿ ಮಾಡಲಾಗುತ್ತಿದೆ. ಇದರಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಮತ್ತು ಕಾರ್ಯ ನಿರ್ವಾಹಕ ಅಭಿಯಂತರರು ಮತ್ತು ಸ್ಥಳಿಯ ಶಾಸಕರು ಆದ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಇವರ ಕೈವಾಡ ಇದೆ ಎಂದು ದೀಪಕ್ ಪಾಟೀಲ್ ಆಪಾದಿಸಿದ್ದಾರೆ.
ಈ ರೀತಿ ಏ.ಖಿ.P.ಖಿ ಕಾಯ್ದೆ ಉಲ್ಲಖಂಘಿಸುತ್ತಿರುವ ಮತ್ತು ತಮಗೆ ಬೇಕಾದವರಿಗೆ ಕಾಮಗಾರಿ ಗುತ್ತಿಗೆ ಕೊಡುವ ದುರುದ್ದೇಶದಿಂದ ಈ ರೀತಿ ಟೆಂಡರ ಕರೆಯದೆ ಕಾಮಗಾರಿ ಆರಂಭಿಸುತ್ತಿರುವ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ತರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಹಾಗೂ ನಿಯಮದಂತೆ ಟೆಂಡರ ಆದ ಮೇಲೆ ಕಾಮಗಾರಿ ಆರಂಭಿಸುವಂತೆ ಅವರು ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.