ಟೆಂಟ್ ತೆರವಿಗೆ ರೈತ ನಾಯಕ ಟಿಕಾಯತ್ ಆಕ್ಷೇಪ

ನವದೆಹಲಿ, ಅ.31- ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿ ಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಟೆಂಟ್ ಗಳನ್ನು ತೆರವುಗೊಳಿಸುವುದರ ವಿರುದ್ಧ ಭಾರತೀಯ ಕಿಸಾನ್ ಒಕ್ಕೂಟ ನಾಯಕ ರಾಕೇಶ್ ಟಿಕಾಯತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಆಡಳಿತ ಟೆಂಟ್ ಗಳನ್ನು ತೆರವುಗೊಳಿಸಿದರೆ ರೈತರು ಪೊಲೀಸ್ ಠಾಣೆ ಹಾಗೂ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಗಳಲ್ಲಿಯೇ ಟೆಂಟ್ ಗಳನ್ನು ಹಾಕಿಕೊಳ್ಳುತ್ತಾರೆ ಎಂದು ಎಚ್ವರಿಕೆ ನೀಡಿದ್ದಾರೆ.

ಜೆಸಿಬಿಗಳ ಸಹಾಯದಿಂದ ಟೆಂಟ್ ಗಳನ್ನು ಆಡಳಿತ ತೆರವುಗೊಳಿಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಟ್ವೀಟ್ ಮಾಡಿರುವ ಟಿಕಾಯತ್, ಒತ್ತಾಯಪೂರ್ವಕವಾಗಿ ಟೆಂಟ್ ಗಳನ್ನು ತೆರವುಗೊಳಿಸಲು ಯತ್ನಿಸಿದರೆ ದೇಶಾದ್ಯಂತ ರೈತರು ಸರ್ಕಾರಿ ಕಚೇರಿಗಳನ್ನು ಗಲ್ಲಾ ಮಂಡಿಗಳನ್ನಾಗಿ ಪರಿವರ್ತನೆ ಮಾಡಿಕೊಳ್ಳಲಿದ್ದಾರೆ ಎಂದು ಹೇಳಿದರು.

ದೆಹಲಿ ಪೊಲೀಸ್ ರು ಟಿಕ್ರಿ ಹಾಗೂ ಘಾಜಿಪುರ್ ಗಡಿಗಳಲ್ಲಿ ರೈತರ ಟೆಂಟ್ ಗಳನ್ನು ತೆರವುಗೊಳಿಸುತ್ತಿದ್ದಾರೆ.