ಟೆಂಟ್‍ಹೌಸ್ ಬೆಂಕಿಗೆ ಆಹುತಿ

ಕಲಬರಗಿ ಡಿ 23 : ತಾಲೂಕಿನ ಹಾಗರಗುಂಡಗಿ ಗ್ರಾಮದಲ್ಲಿ ಮಧ್ಯರಾತ್ರಿ ಟೆಂಟ್ ಹೌಸ್ ಗೆ ಬೆಂಕಿ ಬಿದ್ದು ಟೆಂಟ್ ಹೌಸ್ ಹೊತ್ತಿ ಉರಿದ ಘಟನೆ ನಡೆದಿದೆ. ಶರಣಗೌಡ ರಾಸಣಗಿ ಎಂಬುವವರಿಗೆ ಸೇರಿದ ಟೆಂಟ್ ಹೌಸ್ ಇದಾಗಿದೆ.
ಬೆಂಕಿಯಲ್ಲಿ 100 ಕುರ್ಚಿ, ಡಿಜೆ ಸಿಸ್ಟಮ್ಸ್, 30 ಶಾಮಿಯಾನ, ಮ್ಯಾಟ್ ಎಲ್ಲವೂ ಸುಟ್ಟು ಕರಕಲಾಗಿವೆ.ಇವುಗಳ ಮೌಲ್ಯ ಸುಮಾರು 15 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಮಧ್ಯರಾತ್ರಿಯಲ್ಲಿ ಕಿಡಿಗೇಡಿಗಳು ರಾಜಕೀಯ ದ್ವೇಷದಿಂದ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ.