ಟೆಂಪರ್ ಚಿತ್ರೀಕರಣ ಪೂರ್ಣ

ಕನ್ನಡ ಹಾಗೂ ತೆಲುಗು ಸೇರಿ ಭಾಷೆಗಳಲ್ಲಿ ನಿರ್ಮಾಣವಾಗಿರುವ, ಮಾಸ್ ಎಂಟಟೈನ್‍ಮೆಂಟ್ ಹಾಗು ಲವ್‍ಸ್ಟೋರಿ ಒಳಗೊಂಡ “ಟೆಂಪರ್” ಚಿತ್ರೀಕರಣ ಪೂರ್ಣಗೊಳಿಸಿದೆ.

ಮುಂದಿನ ತಿಂಗಳು ಚಿತ್ರವನ್ನು ತೆರೆಗೆ ತರುವ ಉದ್ದೇಶವಿದ್ದು ಇದೇ ತಿಂಗಳಲ್ಲಿ ಟ್ರೈಲರ್ ಬಿಡುಗಡೆ ಮಾಡಲು ಚಿತ್ರ ತಂಡ ನಿರ್ಧರಿಸಿದೆ. ಮಂಜುಕವಿ ಆಕ್ಷನ್ ಕಟ್ ಹೇಳಿರುವ ಚಿತ್ರ ಇದು.ಕುಟುಂಬ ಸಮೇತ ವೀಕ್ಷಿಸಬಹುದಾದ ಫ್ಯಾಮಿಲಿ ಸೆಂಟಿಮೆಂಟ್ ಚಿತ್ರವನ್ನು

ಬೆಂಗಳೂರು, ಮಂಡ್ಯ, ಮೈಸೂರು, ನಂಜನಗೂಡು, ಶ್ರೀರಂಗಪಟ್ಟಣ, ಚಿಕ್ಕಮಗಳೂರು ಹಾಗೂ ಮಡಿಕೇರಿ ಸುತ್ತಮುತ್ತ 50 ದಿನಗಳ ಕಾಲ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.

ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಿರ್ದೇಶಕ ಮಂಜುಕವಿ, ಚಿಕ್ಕವನಿದ್ದಾಗಿಂದಲೂ ತಕ್ಷಣ ಕೋಪಗೊಳ್ಳುವ ಗುಣವಿರುವ ನಾಯಕ, ಕಾರ್ ಗ್ಯಾರೇಜ್ ಇಟ್ಟುಕೊಂಡವ. ಅದೇ ಊರಿನ ಗೌಡನ ಮಗಳು ಗೀತಾ ಮೇಲೆ ಆತನಿಗೆ ಪ್ರೀತಿ. ಆ ಸಂದರ್ಭದಲ್ಲಿ ಆತ ಹೇಗೆ  ತನ್ನ ಕುಟುಂಬ ಹಾಗೂ ತನ್ನ ಪ್ರೇಯಸಿ ಇಬ್ಬರನ್ನು ಕಾಪಾಡಿಕೊಳ್ಳುತ್ತಾನೆ ಎನ್ನುವುದೇ ಟೆಂಪರ್ ಚಿತ್ರದ ಕಥೆ ಎನ್ನುವ ವಿವರದ ಅವರದು.

ಮೋಹನ್ ಬಾಬು ಬಾಬು ಹಾಗೂ ವಿ.ವಿನೋದ್‍ಕುಮಾರ್ ನಿರ್ಮಾಣ ಮಾಡಿದ್ದಾರೆ. ಚಿತ್ರದ ಮೂಲಕ ಆರ್ಯನ್ ಸೂರ್ಯ ಹಾಗೂ ಕಾಶಿಮಾ ಮೊದಲಬಾರಿಗೆ ನಾಯಕ, ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.

ಧನು ಯಲಗಚ್,ಪವನ್‍ಕುಮಾರ್ ನಾಯಕನ ಸ್ನೇಹಿತರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ತಬಲಾನಾಣಿ, ಸುಧಾ ಬೆಳವಾಡಿ, ಟೆನ್ನಿಸ್ ಕೃಷ್ಣ, ಬಲ ರಾಜವಾಡಿ, ಯತಿರಾಜ್  ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು, ಆರ್.ಹರಿಬಾಬು ಸಂಗೀತ,ಆರ್.ಕೆ.ಶಿವಕುಮಾರ್ ಕ್ಯಾಮರ ಚಿತ್ರಕ್ಕಿದೆ.