ಟೆಂಗಳಿ: ಶ್ರೀ ಶರಣಬಸವೇಶ್ವರ ಜಾತ್ರೆ ರದ್ದು

ಕಾಳಗಿ:ಎ.27: ಮೇ.1ರಂದು ಜರುಗಬೇಕಾಗಿದ್ದ, ಟೆಂಗಳಿ ಆರಾಧ್ಯ ದೈವ ಶ್ರೀ ಭೀಮೇಶ್ವರ ಹೆಸರಿನಲ್ಲಿ ಜರುಗುವ ಶರಣಬಸವೇಶ್ವರ ಜಾತ್ರಾ ಮಹೋತ್ಸವ ಹಾಗೂ ಪಲ್ಲಕಿ ಮಹೋತ್ಸವ ಕೊರೋನಾ ವೈರಸ್ 2ನೇ ಅಲೆ ಹೆಚ್ಚಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಹಾಗು ಸರಕಾರದ ಆದೇಶದ ಮೇರೆಗೆ ಜಾತ್ರಾ ಮಹೋತ್ಸವ ರದ್ದು ಮಾಡಲಾಗಿದೆ ಎಂದು ಶ್ರೀ ಭೀಮೇಶ್ವರ ಜೋರ್ಣೊದ್ದಾರ ಹಾಗು ಟ್ರಸ್ಟ್ ಸಮಿತಿ ಅಧ್ಯಕ್ಷರಾದ ವಿರೇಶ ವಾಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಳಗಿ ತಾಲೂಕಿನ ಟೆಂಗಳಿ ಆರಾಧ್ಯ ದೈವ ಶ್ರೀ ಭೀಮೇಶ್ವರ ಹೆಸರಿನಲ್ಲಿ ಜರುಗುವ ಶ್ರೀ ಶರಣಬಸವೇಶ್ವರ ಜಾತ್ರಾ ಮಹೊತ್ಸವ ಹಾಗೂ ಪಲಕ್ಕಿ ಮಹೋತ್ಸವ ಮೇ 01ರಂದು ಜರುಗಬೇಕಾಗಿತ್ತು, ಆದರೆ ಕೊರೋನಾ ವೈರಸ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರದ ಕಟ್ಟುನಿಟ್ಟಿನ ಆದೇಶ ಪಾಲಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ, ಎನ್ನುತ್ತಾ ಸಂದರ್ಭದಲ್ಲಿ ಜಾತ್ರೆಗಿಂತ ಭಕ್ತರ ಆರೋಗ್ಯ ಮುಖ್ಯವಾಗಿದ್ದು ದಿನಾಂಕ: ಮೇ 01ರಂದು ಎಲ್ಲಾ ಭಕ್ತರು ದೇವಸ್ಥಾನಕ್ಕೆ ಬರದಂತೆ ತಮ್ಮ ತಮ್ಮ ಮನೆಯಲ್ಲಿದ್ದು ಶ್ರೀ ಭೀಮೇಶ್ವರ ದೇವರ ನಾಮಸ್ಮರಣೆಯೊಂದಿಗೆ ನಾಡಿಗೆ ಕಾಡುತ್ತಿರುವ ಮಹಾಮಾರಿ ಕೊರೋನಾ ತೊಲಗಲಿ ಎಂದು ಪ್ರಾರ್ಥನೆ ಮಾಡಿಕೊಳ್ಳಬೇಕೆಂದು ವಿನಂತಿಸಿಕೊಂಡಿದ್ದಾರೆ.