ಟೀ ಕೇಕ್ ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು:

ಬೆಣ್ಣೆ೧/೩ ಕಪ್,
ಸಕ್ಕರೆ ಹುಡಿಮಾಡಿದ್ದು೧/೨ ಕಪ್,
ಕಂಡನ್ಸಡ್ ಮಿಲ್ಕ್- ಮುಕ್ಕಾಲು ಕಪ್,
ಬಿಸಿಹಾಲು- ೧ ಕಪ್,
ಲಿಂಬೆರಸ೧/೨ ಚಮಚ
ಮೈದಾ೧/೨ ಕಪ್,
ಬೇಕಿಂಗ್ ಪೌಡರ್- ೨ ಚಮಚ
ಬೇಕಿಂಗ್ ಸೋಡ ೧/೨ ಚಮಚ
ವೆನಿಲಾ ಎಸೆನ್ಸ್

ಮಾಡುವ ವಿಧಾನ:

ಬೆಣ್ಣೆಯನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಹುಡಿಮಾಡಿದ ಸಕ್ಕರೆ ಸೇರಿಸಿ ಪುನಃ ಚೆನ್ನಾಗಿ ಬೆರೆಸಿಕೊಳ್ಳಿ. ಬಳಿಕ ಕಂಡೆನ್ಸೆಡ್ ಮಿಲ್ಕ್ ಸೇರಿಸಿ ಬೆರೆಸಿ. ಬಿಸಿ ಹಾಲಿಗೆ ಲಿಂಬೆ ರಸ ಹಾಕಿ, ಹಾಲು ಹಾಳಾಗಲಾರಂಭಿಸಿದಾಗ ಕಂಡನ್ಸಡ್ ಮಿಲ್ಕ್ ಮಿಶ್ರಣಕ್ಕೆ ಸೇರಿಸಿಕೊಳ್ಳಿ. ಇದಕ್ಕೆ ಮೈದಾ, ಬೇಕಿಂಗ್ ಸೋಡ, ಪೌಡರ್ ಅನ್ನು ಗಟ್ಟಿಯಾಗದಂತೆ
ಸೇರಿಸಿಕೊಳ್ಳಿ. ಬಳಿಕ ವೆನಿಲಾ ಎಸೆನ್ಸ್ ಸೇರಿಸಿ. ಈ ಮಿಶ್ರಣವನ್ನು ಒಂದು ಬೌಲ್‌ನಲ್ಲಿ ಹಾಕಿ.

ಇಡ್ಲಿ ಹಂಡೆಯಲ್ಲೋ ಅಥವಾ ಪ್ಯಾನ್‌ನಲ್ಲೋ ಒಂದು ಪ್ಲೇಟನ್ನು ಮಗುಚಿ ಹಾಕಿ ಬೌಲ್ ಅನ್ನು ಅದರ ಮೇಲೆ ಇಟ್ಟು
ಮುಚ್ಚಿಡಿ.

ಒಂದು ಬಟ್ಟೆಯ ತುಂಡಿನಿಂದ ಪಾತ್ರೆಯ ಮೇಲಿನಿಂದ ಆವಿ ಹೋಗದ ರೀತಿಯಲ್ಲಿ ಮುಚ್ಚಿಡಿ. ೪೦ ನಿಮಿಷ ಸಣ್ಣ ಉರಿಯಲ್ಲಿರಲಿ.

ಬಳಿಕ ಅದನ್ನು ಹೊರ ತೆಗೆಯಿರಿ. ತಣ್ಣಗಾದ ಬಳಿಕ ಕೇಕ್ ರೀತಿ ಯಲ್ಲಿ ಕತ್ತರಿಸಿ