ಟೀಚರ್‍ಸ್ ಕಾಲೋನಿಗೆ ಹೈಟೆಕ್ ಸ್ಪಶ-ನಾಗೇಶ್

ಮುಳಬಾಗಿಲು.ನ೧೧:ವಾರ್ಡ್ ನಂಬರ್ ೫ರ ಟೀಚರ್‍ಸ್ ಕಾಲೋನಿ ಮೂಲಭೂತ ಸೌಲಭ್ಯಗಳ ವಂಚಿತವಾಗಿದ್ದು ಈ ವಾರ್ಡಿಗೆ ಇನ್ನು ೬ ತಿಂಗಳಲ್ಲಿ ಹೈಟೆಕ್ ಸ್ಪರ್ಶ ನೀಡಿ ಮಾದರಿ ಬಡಾವಣೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಹೆಚ್.ನಾಗೇಶ್ ಹೇಳಿದರು.
ಕಾಲೋನಿಯ ಗಣಪತಿ ದೇವಾಲಯದ ಮುಂಭಾಗದಲ್ಲಿ ಮಂಗಳವಾರ ಆಯೋಜಿಸಿದ್ದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಮಾತನಾಡಿ ೫ನೇ ವಾರ್ಡಿನ ಮುಖ್ಯರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ೭೫ರ ವರೆಗೂ ಎರಡೂ ಬದಿಯಲ್ಲಿ ಚರಂಡಿ ಹಾಗೂ ಸಿಮೆಂಟ್ ರಸ್ತೆಯನ್ನು ಮಾಡಲಾಗುವುದು ಅಲ್ಲದೆ ೪-೫ ಉಪರಸ್ತೆಗಳನ್ನು ಇನ್ನೊಂದು ಎರಡು ತಿಂಗಳಲ್ಲಿ ಅಭಿವೃದ್ಧಿಪಡಿಸುವುದು ಬತ್ತಿರುವ ೨ ಕೊಳವೆಬಾವಿಗಳು ರೀ ಡ್ರಿಲ್ ಹೊಸದಾಗಿ ೨ ಕೊಳವೆಬಾವಿಗಳನ್ನು ಕೊರೆಸಿ ನೀರಿನ ಸಮಸ್ಯೆಯನ್ನು ತಕ್ಷಣಕ್ಕೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ವಿನಾಯಕ ದೇವಾಲಯ ಅಭಿವೃದ್ಧಿಗೆ ಮುಜರಾಯಿ ಇಲಾಖೆಯಿಂದ ನೆರವನ್ನು ಒದಗಿಸಲು ಪ್ರಯತ್ನಿಸಲಾಗುವುದು ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸಿ ರಸ್ತೆಗಳಿಗೆ ಚರಂಡಿ ತ್ಯಾಜ್ಯ ಬಾರದಂತೆ ಕ್ರಮ ಕೈಗೊಳ್ಳಲಾಗುವುದು ಇನ್ನು ಮುಂದೆ ನಗರದ ೩೧ ವಾರ್ಡುಗಳಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುವುದರ ಜೊತೆಗೆ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಸರ್ಕಾರ ಅನುದಾನ ನೀಡುತ್ತಿದ್ದು ಅವುಗಳನ್ನು ಉಪಯೋಗಿಸಿಕೊಳ್ಳಲು ಎಲ್ಲರೂ ಕೈ ಜೋಡಿಸಬೇಕೆಂದರು.
ನಗರಸಭಾಧ್ಯಕ್ಷ ರಿಯಾಜ್ ಅಹ್ಮದ್, ಮಾಜಿ ಅಧ್ಯಕ್ಷ ಎಂ.ಮುನಿರಾಜು, ಉಪಾಧ್ಯಕ್ಷೆ ಭಾಗ್ಯಮ್ಮರಾಮಚಂದ್ರಯ್ಯ, ಪೌರಾಯುಕ್ತ ಜಿ.ಶ್ರೀನಿವಾಸಮೂರ್ತಿ, ವಾರ್ಡಿನ ಸದಸ್ಯೆ ಎಂ.ಸರಳನವೀನ್‌ಕುಮಾರ್, ನಗರಸಭಾ ಸದಸ್ಯರಾದ ಎಸ್.ವೈ.ರಾಜಶೇಖರ್, ಜಿ.ನಾಗರಾಜ್, ಡಿ.ಸೋಮಣ್ಣ, ಟಿ.ಎಸ್.ಸುವರ್ಣರಾಜಣ್ಣ, ಎಂ.ಭಾರತಿಸುಬ್ರಮಣಿ, ಪದ್ಮಜರಘು, ಕೆ.ಎಸ್.ಆರ್.ಟಿ.ಸಿ. ಎಸ್ಸಿಎಸ್ಟಿ ನೌಕರರ ಸಂಘದ ಅಧ್ಯಕ್ಷ ಪ್ರೇಮ್‌ಕುಮಾರ್, ನಿವೃತ್ತ ಎ.ಎಸ್.ಐ ಹನುಮಪ್ಪ, ನಿವೃತ್ತ ಮುಖ್ಯ ಶಿಕ್ಷಕ ಕಾಮನೂರು ಕೆ.ಮರಿಯಪ್ಪ, ನಲ್ಲೂರು ಟಿ.ವರದರಾಜ್, ಬಿ.ಜೆ.ಪಿ ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿ ಒ.ಬಿ.ಸಿ. ಘಟಕದ ಅಧ್ಯಕ್ಷ ಕೆ.ಹೆಚ್.ನಾಗರಾಜ್, ಜಿಲ್ಲಾ ಕಾಂಗ್ರೆಸ್ ಮಂಡಿಕಲ್ ಎನ್.ಎಸ್.ವೆಂಕಟಾಚಲಪತಿಗೌಡ, ಯುವಕಾಂಗ್ರೆಸ್ ಮಾಜಿ ಅಧ್ಯಕ್ಷ ಹೆಚ್.ಗೊಲ್ಲಹಳ್ಳಿ ಜಿ.ಎಸ್.ಜಗದೀಶ್, ಗುಮ್ಲಾಪುರ ಅಮರಪ್ಪ ಮತ್ತಿತರರು ಇದ್ದರು.