ಟಿ-20 ಬಳಿಕ ಕೊಹ್ಲಿ ಸೀಮಿತ ಓವರ್ ಗಳ ನಾಯಕತ್ವ ತೊರೆಯುವ ಸಾಧ್ಯತೆ

ನವದೆಹಲಿ, ಸೆ.13- ದುಬೈನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಕ್ರಿಕೆಟ್ ಚಾಂಪಿಯನ್ ಬಳಿಕ ವಿರಾಟ್ ಕೊಹ್ಲಿ ಸೀಮಿತ ಓವರ್ ಗಳ ನಾಯಕತ್ವದಿಂದ ಕೆಳಗಿಳಿಯುವ ಸಾಧ್ಯತೆಯಿದೆ.
ಭಾರತ ತಂಡದ ಆರಂಭಿಕ ಆಟಗಾರ ರೋಹಿತ್ ಶರ್ಮಾ ನಾಯಕತ್ವದ ಜವಾಬ್ದಾರಿ ವಹಿಸಿಕೊಳ್ಳುವ ನಿಟ್ಟಿನಲ್ಲಿ ಹಾದಿ ಸುಗಮಗೊಳಿಸಲು ಅಕ್ಟೋಬರ್-ನವೆಂಬರ್ ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಬಳಿಕ ಏಕದಿನ ಹಾಗೂ ಟಿ-20 ಪಂದ್ಯಗಳಿಗೆ ಭಾರತ ತಂಡದ ನಾಯಕತ್ವದಿಂದ ನಿರ್ಗಮಿಸುವ ಸಾಧ್ಯತೆ ದಟ್ಟವಾಗಿದೆ.
ರೋಹಿತ್ ಶರ್ಮಾ ಅವರಿಗೆ ನಾಯಕತ್ವ ಜವಾಬ್ದಾರಿ ನೀಡಲು ಮುಂದಾಗಿದ್ದಾರೆ. ಬ್ಯಾಟಿಂಗ್ ನಲ್ಲಿ ಗಮನ ಕೇಂದ್ರಿಕರಿಸುವ ಅಗತ್ಯತೆ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿ ಅವರೇ ಸ್ವಯಂ ಪ್ರೇರಣೆಯಿಂದ ಘೋಷಣೆ ಮಾಡಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.
ಈ ಹಿಂದೆಯೂ ಸೀಮಿತ ಓವರ್ ಗಳ ಕ್ರಿಕೆಟ್‌ ಗೆ ರೋಹಿತ್ ಶರ್ಮಾ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಬೇಕೆಂಬ ಪ್ರಸ್ತಾಪ ಕೇಳಿಬಂದಿತ್ತು.‌ ಇದರ ಬೆನ್ನಲ್ಲೇ ಕೊಹ್ಲಿಯವರು ಸ್ವಯಂಪ್ರೇರಿತರಾಗಿ ಸೀಮಿತ ಓವರ್ ಗಳ ಟೀಮ್ ಇಂಡಿಯಾ ನಾಯಕತ್ವದ ಹಿಂದೆ ಸರಿಯಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.