
ಸಂಜೆವಾಣಿ ವಾರ್ತೆ
ಹೊಸಪೇಟೆ, ಮೇ.25: ಟಿ.ಬಿ.ಬೋರ್ಡ್ ಆಡಳಿತ ಮಂಡಳಿ ಇಸ್ಟ್ ಇಂಡಿಯಾ ಕಂಪನಿಯಂತೆ ವರ್ತಿಸುತ್ತಿದ್ದೆ ಎಂದು ಮಾಜಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದರು.
ಟಿ.ಬಿ.ಡ್ಯಾಂ ವೈಕುಂಠ ಅತಿಥಿ ಗೃಹದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಎಲ್ಲಾ ಹಂತದ ಅನುಮತಿಯ ನಂತರವೂ ಟಿ.ಬಿ.ಬೋರ್ಡ್ ಈ ಭಾಗದ ಅನುಪಯುಕ್ತ ಹಾಗೂ ವಿಜಯನಗರ ಜಿಲ್ಲಾಡಳಿತಕ್ಕೆ ಅಗತ್ಯವಾದ ಜಾಗವನ್ನು ಹಸ್ತಾಂತರಿಸಲು ಆಡಳಿತ ಮಂಡಳಿಯ ಮುಖ್ಯವಾಗಿ ನಾರಾಯಣರೆಡ್ಡಿ ಮೊಂಡುತನದಿಂದ ಕಾರ್ಯ ನಿಂತಿದೆ ಸರ್ಕಾರದ ಆದೇಶದ ಹೊರತಾಗಿಯೂ ವಾಣಿಜ್ಯ ವ್ಯವಹಾರದಂತೆ ಹಣ ಕೇಳುತ್ತಿದ್ದಾರೆ ಎಂದರು ಸುಲಲಿತವಾಗಿ ಅನುಮತಿಸಿ ಹಸ್ತಾಂತರಿಸಿದರೆ ಸರಿ, ಇಲ್ಲವಾದರೆ ಕೇಂದ್ರ ಸರ್ಕಾರದೊಂದಿಗೆ ವ್ಯವಹರಿಸಿ ಸರಿಪಡಿಸಬೇಕಾಗುತ್ತದೆ ಎಂದರು.
ಮುಂದೆಯೂ ಸಹ ಬಿ.ಬಿ.ಬೋರ್ಡ್ ಇಸ್ಟ್ ಇಂಡಿಯಾ ಕಂಪನಿ ದೋರಣೆಯನ್ನು ಸರಿ ಪಡಿಸಿಕೊಳ್ಳಬೇಕು ಎಂದು ತಾಕೀತು ಮಾಡಿದರು.