ಟಿ.ಗಿರಿಜರ ಪುಸ್ತಕ ಕುರಿತು ನಿಮ್ಮ ಅನಿಸಿಕೆ ಪ್ರಬಂಧ ಸ್ಪರ್ಧೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಜು.4; ಹಿರಿಯ ಲೇಖಕಿ ಟಿ.ಗಿರಿಜ ಅವರು ನಮ್ಮಿಂದ ದೂರವಾಗಿ ಒಂಭತ್ತು ವರ್ಷಗಳು ಕಳೆದಿವೆ. ಅವರ ಸಾಹಿತ್ಯ ಕೃಷಿ ಮಾತ್ರ ಸದಾ ನೆನಪಿನಲ್ಲಿ ಉಳಿಯು ವಂತಹುದಾಗಿದೆ. ಈ ಹಿನ್ನೆಲೆಯಲ್ಲಿ ಜುಲೈ ತಿಂಗಳಿನಲ್ಲಿ ಅವರ ನೆನಪಿನಲ್ಲಿ ಕಾರ್ಯಕ್ರಮಗಳ ಏರ್ಪಾಡಿಗೆ ಸಿದ್ಧತೆಗಳು ನಡೆದಿವೆ.ಟಿ.ಗಿರಿಜಾರ ನೆನಪಿನಲ್ಲಿ ‘ಜಿಲ್ಲೆ ಸಮಾಚಾರ’ಪತ್ರಿಕಾ ಬಳಗವು ಪ್ರಬಂಧ ಸ್ಪರ್ಧೆಯೊಂದನ್ನು ಆಯೋಜಿಸಿದೆ.ವಯೋಮಾನ ಭೇದವಿಲ್ಲದೆ ಎಲ್ಲರೂ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಯಾವುದೇ ಪ್ರವೇಶ ಧನವೂ ಇರುವುದಿಲ್ಲ.ಆಯ್ಕೆಯಾದ ಕೆಲವು ಬರಹಗಳಿಗೆ ಆಕರ್ಷಕ ಬಹುಮಾನವನ್ನು ಕೊಡಲಾಗುವುದು.ಪ್ರಬಂಧವು ‘ಟಿ.ಗಿರಿಜಾರ ಯಾವುದೇ ಪುಸ್ತಕ’ ಕುರಿತ ನಿಮ್ಮ ಅನಿಸಿಕೆಯನ್ನು ೩ ಪುಟದ ಮಿತಿಗೊಳಪಡಿಸಿ ಬರೆಯಬೇಕು. ಸ್ವಂತ ಕೈಬರವಣಿಗೆಗೆ ಆದ್ಯತೆ ಉಂಟು. ಡಿಟಿಪಿ ಮಾಡಿ ಕಳುಹಿಸಿಕೊಡಬಹುದಾಗಿದೆ. ಪ್ರಬಂಧವನ್ನು ನಮ್ಮ ಈ ವಿಳಾಸಕ್ಕೆ ಜುಲೈ ೮ ನೇ ತಾರೀಖಿನೊಳಗೆ ತಲುಪುವಂತೆ ಕಳುಹಿಸಬೇಕು. ವ್ಯವಸ್ಥಾಪಕರು, ಜಿಲ್ಲೆ ಸಮಾಚಾರ ದಿನಪತ್ರಿಕಾ ಬಳಗ,ನಂ:೧೨, ನಾಯಕ ಹಾಸ್ಟೆಲ್ ಕಾಂಪ್ಲೆಕ್ಸ್,ಪಿ.ಜೆ.ಬಡಾವಣೆ,ದಾವಣಗೆರೆ.೨ ಮೊ: 9740112249,96065 68950