ಟಿ೨೦ ವಿಶ್ವಕಪ್ ಆಯ್ಕೆಗೆ ಸಭೆ

ಹೊಸದಿಲ್ಲಿ.ಏ.೨೮- ಟಿ೨೦ ವಿಶ್ವಕಪ್‌ಗೆ ತಂಡದ ಆಯ್ಕೆ ಸಂಬಂದ ನಾಯಕ ರೋಹಿತ್ ಶರ್ಮಾ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್‌ಖರ್ ಅವರನ್ನು ದೆಹಲಿಯಲ್ಲಿ
ಭೇಟಿಯಾಗಲಿದ್ದಾರೆ.
ಯುಎಸ್ ಹಾಗೂ ವೆಸ್ಟ್‌ಇಂಡೀಸ್‌ನಲ್ಲಿ ನಡೆಯಲಿರುವ ಟಿ೨೦ ವಿಶ್ವಕಪ್ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್
ಅಗರ್‌ಖರ್ ಮತ್ತು ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಸಭೆಸೇರಲಿದ್ದಾರೆ.ಸಭೆಯಲ್ಲಿ ೧೫ ಆಟಗಾರರ ಆಯ್ಕೆ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಮೇ ೧ರಂದು ಅಧಿಕೃತವಾಗಿ ಭಾರತ ತಂಡವನ್ನು ಘೋಷಿಸುವ ಸಾಧ್ಯತೆ ಇದೆ.
ಈ ಬಾರಿ ಟಿ೨೦ ವಿಶ್ವಕಪ್‌ಗೆ ಅಚ್ಚರಿಯ ಆಯ್ಕೆ ಇರಬಹುದೆಂದು ಹೇಳಲಾಗುತ್ತಿದೆ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಶಿವಂ ದುಬೆ ಮತ್ತು ರಿಂಕು ಸಿಂಗ್
ರೇಸ್‌ನಲ್ಲಿದ್ದಾರೆ. ವಿಕೆಟ್ ಕೀಪರ್ ಸ್ಥಾನಕ್ಕೆ ಕೆ,ಎಲ್.ರಾಹುಲ್, ಸಂಜು ಸ್ಯಾಮ್ಸನ್, ರಿಷಭ್ ಪಂತ್ ಮತ್ತು ದಿನೇಶ್ ಕಾರ್ತಿಕ್ ಪೈಪೋಟಿ ನಡೆಸುತ್ತಿದ್ದಾರೆ.
ಸ್ಪಿನ್ ವಿಭಾಗದಲ್ಲಿ ಯಜ್ವಿಂದರ್ ಚಾಹಲ್, ರವಿ ಬಿಷ್ಣೋಯಿ ಮತ್ತು ಅಕ್ಷರ್ ಪಟೇಲ್ ಆಯ್ಕೆಯ ನಿರೀಕ್ಷೆಯಲ್ಲಿದ್ದಾರೆ.