ಟಿಸಿಎಸ್ ಟೆಕ್‍ಬೈಟ್ಸ್: ಬಿಎಲ್‍ಡಿಇಗೆ ಪ್ರಶಸ್ತಿ

ಕಲಬುರಗಿ,ಏ.1- ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಮತ್ತು ಕರ್ನಾಟಕ ಸರ್ಕಾರ ಪ್ರವರ್ತಿಸಿದ ಸ್ವಾಯತ್ತ ಸಂಸ್ಥೆಯಾದ ಐಟಿ ಶಿಕ್ಷಣ ಗುಣಮಟ್ಟ ಮಂಡಳಿ (ಬೈಟ್ಸ್) ಆಯೋಜಿಸಿದ್ದ ಟಿಸಿಎಸ್ ಟೆಕ್‍ಬೈಟ್ಸ್ 14ನೇ ಆವೃತ್ತಿಯ ಕಲ್ಬುರ್ಗಿ ಪ್ರಾದೇಶಿಕ ಫೈನಲ್‍ನಲ್ಲಿ ವಿಜಯಪುರ ಬಿಎಲ್‍ಡಿಇಎ ಕಾಲೇಜ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ವಿದ್ಯಾರ್ಥಿ ಐಮನ್ ಪಾಟೀಲ್ ಪ್ರಶಸ್ತಿ ಗೆದ್ದಿದ್ದಾರೆ. ವಿಜಯಪುರದ ಎಸ್‍ಇಸಿಬಿಎ ಕಾಲೇಜ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯ ಐಶ್ವರ್ಯ ಮಾರ್ಥೂರ್ ರನ್ನರ್ ಅಪ್ ಆಗಿದ್ದಾರೆ.
ಟಿಸಿಎಸ್ ವಿಜೇತರಿಗೆ ರೂ 12,000 ಮೌಲ್ಯದ ಉಡುಗೊರೆ ವೋಚರ್‍ಗಳನ್ನು ಮತ್ತು ರೂ 10,000 ಮೌಲ್ಯದ ರನ್ನರ್ ಅಪ್ ವೋಚರ್‍ಗಳನ್ನು ನೀಡಿದೆ. ಜತೆಗೆ ಎಲ್ಲ ಫೈನಲಿಸ್ಟ್‍ಗಳಿಗೆ ಗಿಫ್ಟ್ ವೋಚರ್‍ಗಳನ್ನು ನೀಡಲಾಯಿತು. ವಿಜೇತರು ಏಪ್ರಿಲ್ 5 ರಂದು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಫೈನಲ್‍ನಲ್ಲಿ ಗುಲ್ಬರ್ಗವನ್ನು ಪ್ರತಿನಿಧಿಸಲಿದ್ದಾರೆ ಎಂದು ಟಿಸಿಎಸ್ ಬೆಂಗಳೂರಿನ ಪ್ರಾದೇಶಿಕ ಮುಖ್ಯಸ್ಥ ಸುನಿಲ್ ದೇಶಪಾಂಡೆ ಮತ್ತು ಬೈಟ್ಸ್‍ನ ಅಧ್ಯಕ್ಷರಾದ ಪ್ರೊ.ಎಸ್.ಸಡಗೋಪನ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಈ ವರ್ಷ ಕಲ್ಬುರ್ಗಿ ವಲಯದ 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪೂರ್ವಭಾವಿ ಆನ್‍ಲೈನ್ ಪರೀಕ್ಷೆಯಲ್ಲಿ ಭಾಗವಹಿಸಿದ್ದರು. ಅದರಲ್ಲಿ ಮೊದಲ ಆರು ಸ್ಥಾನ ಪಡೆದ ವಿದ್ಯಾರ್ಥಿಗಳು ಸಂವಾದಾತ್ಮಕ ವರ್ಚುವಲ್ ರಸಪ್ರಶ್ನೆಗೆ ಅರ್ಹತೆ ಪಡೆದರು. ರಸಪ್ರಶ್ನೆಯು ಟೆಕ್ ಮಾನಿಟರ್, ಟೆಕ್ ಕ್ಯೂರಿಯಾಸಿಟಿ, ಟೆಕ್ ಸಕ್ರ್ಯೂಟ್, ಟೆಕ್ ಅನ್ಲಿಮಿಟೆಡ್ ಮತ್ತು ಟೆಕ್ ಅಜಿಲಿಟಿ ಹೀಗೆ ಐದು ವಿಭಾಗಗಳನ್ನು ಹೊಂದಿತ್ತು.