ಟಿಬಿ ಲಸಿಕೆ ಕ್ಲಿನಿಕಲ್ ಪ್ರಯೋಗ ಪ್ರಾರಂಭ

ನವದೆಹಲಿ ,ಮಾ.೨೫-ಹೈದರಾಬಾದ್ ಮೂಲದ ಪ್ರಮುಖ ಫಾರ್ಮಾ ಕಂಪನಿ ಭಾರತ್ ಬಯೋಟೆಕ್ ಟಿಬಿ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳನ್ನು ಪ್ರಾರಂಭಿಸಿದೆ. ಕ್ಷಯರೋಗವನ್ನು ತಡೆಗಟ್ಟಲು ಉದ್ದೇಶಿಸಿರುವ
ಎಂಟಿಬಿವಿಎಸಿ ಲಸಿಕೆ ವಯಸ್ಕರಲ್ಲಿ ಪ್ರಾಯೋಗಿಕ ಪ್ರಯೋಗಗಳನ್ನು ಪ್ರಾರಂಭಿಸಿದೆ ಎಂದು ಅದು ಹೇಳಿದೆ. ಈ ಲಸಿಕೆಯನ್ನು ಎರಡು ಉದ್ದೇಶಗಳಿಗಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ನವಜಾತ ಶಿಶುಗಳಿಗೆ ಬಿಸಿಜಿ(ಬ್ಯಾಸಿಲಸ್ ಕ್ಯಾಲ್ಮೆಟ್ ಗೆರಿನ್) ಗಿಂತ ಹೆಚ್ಚು ಪರಿಣಾಮಕಾರಿ ಮತ್ತು ದೀರ್ಘಕಾಲೀನವಾಗಿದೆ, ಎರಡನೆಯದನ್ನು ಹದಿಹರೆಯದವರಲ್ಲಿ ಟಿಬಿ ತಡೆಗಟ್ಟಲು ಅಭಿವೃದ್ಧಿಪಡಿಸಲಾಗುತ್ತಿದೆ.
ಶೀಘ್ರದಲ್ಲೇ ಇದು ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ನಂತರ ಜನರನ್ನು ತಲುಪಲಿದೆ ಎಂದು ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಪ್ರಕಟಿಸಿದೆ. ಮಾನವ ಮೂಲದಿಂದ ತಯಾರಾಗುತ್ತಿರುವ ಟಿಬಿ ವಿರುದ್ಧದ ಮೊದಲ ಲಸಿಕೆ ಇದಾಗಿದೆ ಎಂದು ಬಯೋಟೆಕ್ ಹೇಳಿದೆ.
ಭಾರತ್ ಬಯೋಟೆಕ್ ಸ್ಪ್ಯಾನಿಷ್ ಬಯೋಫಾರ್ಮಾಸ್ಯುಟಿಕಲ್ ಕಂಪನಿ ಬಯೋಫ್ಯಾಬ್ರಿ ಸಹಯೋಗದೊಂದಿಗೆ ಈ ಪ್ರಯೋಗಗಳನ್ನು ನಡೆಸುತ್ತಿದೆ. ಸುರಕ್ಷತೆ ಮತ್ತು ಇಮ್ಯುನೊಜೆನಿಸಿಟಿಯನ್ನು ಪ್ರಯೋಗಗಳ ಮೂಲಕ ನಿರ್ಣಯಿಸಲಾಗುತ್ತದೆ. ಇದನ್ನು ೨೦೨೫ ರಲ್ಲಿ ತರಲು ಯೋಜಿಸಲಾಗಿದೆ. ವಿಶ್ವದಲ್ಲಿ ೨೮ ಪ್ರತಿಶತದಷ್ಟು ಟಿಬಿ ಪ್ರಕರಣಗಳು ಭಾರತದ್ದು ಮತ್ತು ಇದು ಒಂದು ದೊಡ್ಡ ಹೆಜ್ಜೆಯಾಗಿದೆ. ಟಿಬಿ ವಿಶ್ವದ ಪ್ರಮುಖ ಸಾಂಕ್ರಾಮಿಕ ಕಾರಣಗಳಲ್ಲಿ ಒಂದಾಗಿದೆ.
ಭಾರತ್ ಬಯೋಟೆಕ್ ಕಾರ್ಯನಿರ್ವಾಹಕ ಅಧ್ಯಕ್ಷ ಕೃಷ್ಣ ಎಲ್ಲ ಮಾತನಾಡಿ, ಕ್ಷಯರೋಗದ ವಿರುದ್ಧ ಹೆಚ್ಚು ಪರಿಣಾಮಕಾರಿಯಾದ ಲಸಿಕೆಗಾಗಿ ನಮ್ಮ ಅನ್ವೇಷಣೆಯು ಇಂದು ಭಾರತದಲ್ಲಿ ಕ್ಲಿನಿಕಲ್ ಪ್ರಯೋಗಗಳೊಂದಿಗೆ ಹೆಚ್ಚಿನ ಉತ್ತೇಜನವನ್ನು ಪಡೆದುಕೊಂಡಿದೆ, ವಯಸ್ಕರು ಮತ್ತು ಹದಿಹರೆಯದವರಲ್ಲಿ ರೋಗವನ್ನು ತಡೆಗಟ್ಟಲು ಟಿಬಿ ಲಸಿಕೆಗಳನ್ನು ಅಭಿವೃದ್ಧಿಪಡಿಸುವ ನಮ್ಮ ಗುರಿಯತ್ತ ಇದು ಒಂದು ದೊಡ್ಡ ಹೆಜ್ಜೆಯಾಗಿದೆ ಎಂದು ಭಾರತ್ ಬಯೋಟೆಕ್ ಇಂಟರ್‌ನ್ಯಾಶನಲ್ ಲಿಮಿಟೆಡ್ ಭಾನುವಾರ ಈ ಮಾಹಿತಿಯನ್ನು ನೀಡಿದೆ.
ವಿಶ್ವದ ೨೮ ಪ್ರತಿಶತದಷ್ಟು ಟಿಬಿ ಪ್ರಕರಣಗಳನ್ನು ಹೊಂದಿರುವ ದೇಶದಲ್ಲಿ ವಯಸ್ಕರು ಮತ್ತು ಹದಿಹರೆಯದವರಲ್ಲಿ ಪರೀಕ್ಷೆಗೆ ಇದು ಪ್ರಮುಖ ಹೆಜ್ಜೆಯಾಗಿದೆ. ಬಯೋಫ್ಯಾಬ್ರಿಯ ಸಿಇಒ ಎಸ್ಟೆಬಾನ್ ರೋಡ್ರಿಗಸ್ ಮಾತನಾಡಿ, ಟಿಬಿಯು ವಿಶ್ವದಲ್ಲಿ ವಿಶೇಷವಾಗಿ ಭಾರತದಲ್ಲಿ ಸಾವಿಗೆ ಪ್ರಮುಖ ಸಾಂಕ್ರಾಮಿಕ ಕಾರಣಗಳಲ್ಲಿ ಒಂದಾಗಿದೆ ಎಂದು ತಿಳಿಸಿದ್ದಾರೆ.