ಟಿಪ್ಪು ಸುಲ್ತಾನ ಜಯಂತಿ ಆಚರಣೆ

ಸುರಪುರ:ನ.11: ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿನ ಸಗರನಾಡು ಎಲೆಕ್ಟ್ರಿಕಲ್ ಕಾರ್ಮಿಕರ ಸಂಘದ ಕಾರ್ಯಾಲಯದಲ್ಲಿ ಮೈಸೂರ ಹುಲಿ ಟಿಪ್ಪು ಸುಲ್ತಾನರ ೨೭೧ನೇ ಜಯಂತಿ ಆಚರಿಸಲಾಯಿತು.ಕಾರ್ಯಕ್ರಮದ ಆರಂಭದಲ್ಲಿ ಟಿಪ್ಪು ಸುಲ್ತಾನರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಹೂಮಾಲೆ ಹಾಕಿ ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ನಗರಸಭೆ ಸದಸ್ಯ ವೆಂಕಟೇಶ ಹೊಸ್ಮನಿ ಮಾತನಾಡಿ,ಟಿಪ್ಪು ಸುಲ್ತಾನ ಈ ದೇಶ ಕಂಡ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು,ಅವರು ದೇಶದ ಸ್ವಾತಂತ್ರಕ್ಕಾಗಿ ತಮ್ಮ ಮಕ್ಕಳನ್ನೆ ಬ್ರಿಟೀಷರಲ್ಲಿ ಒತ್ತೆ ಇಟ್ಟು ಹೋರಾಟ ನಡೆಸಿದ ಮಹಾನ್ ವ್ಯಕ್ತಿಯಾಗಿದ್ದಾರೆ ಎಂದರು.
ಹೋರಾಟಗಾರ ದೇವಿಂದ್ರಪ್ಪ ಪತ್ತಾರ ಮಾತನಾಡಿ,ಇಂದು ಕೆಲವು ಕೋಮುವಾದಿಗಳು ಟಿಪ್ಪು ಸುಲ್ತಾನನನ್ನು ಕಳಂಕಿತ ವ್ಯಕ್ತಿಯಂತೆ ಬಿಂಬಸಲು ಹೊರಟಿದ್ದಾರೆ,ಆದರೆ ಅಂದಿನ ಅರಸರು ಎಲ್ಲರು ಹೋರಾಟ ಮಾಡಿದವರು,ಎದುರಾಳಿಗಳನ್ನು ಕೊಂದವರು,ಆದರೆ ಟಿಪ್ಪು ಸುಲ್ತಾನ ಒಬ್ಬ ಉತ್ತಮ ಆಡಳಿತಗಾರನಾಗಿದ್ದ,ಆತನು ಕಟ್ಟಿಸಿದ ಕೆರೆ ಕುಂಟೆಗಳು ಇಂದಿಗೂ ಜೀವಂತವಾಗಿರುವುದೆ ಸಾಕ್ಷಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಎಸ್ಟಿ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ ದೊರೆ ಆಲ್ದಾಳ , ನಿಜಾದ್ ಹುಸೇನ್, ಉಸ್ತಾದ ಖಾಜಾ ಖಲೀಲ, ಅಹ್ಮದ್ ಅರಕೇರಿ ,ಮಹ್ಮದ ಮೌಲಾ ಸೌದಾಗರ್, ಎಂ.ಪಟೇಲ್ ,ಸಲೀಂ ನಗನೂರಿ, ಸಂಘದ ಅಧ್ಯಕ್ಷ ಅಬ್ದುಲ್ ರೌಫ್, ಆನಂದ ಕಟ್ಟಿಮನಿ, ಅಬೀದ್ ಪಗಡಿ, ವಿಷ್ಣುವರ್ಧನ ಟೊಣಪೆ, ಬಂದೇನವಾಜ ,ಅಮ್ಜಾದ್ ಹುಸೇನ್ ,ಖಂಡಪ್ಪ ಪೂಜಾರಿ, ದವಲಸಾಬ್, ಶಾಕೀರ್ ಹುಸೇನ್ ಸೇರಿದಂತೆ ಅನೇಕರಿದ್ದರು.