ಟಿಪ್ಪು ಸುಲ್ತಾನ ಜಯಂತಿ ಆಚರಣೆ

ಬಸವನಬಾಗೇವಾಡಿ:ನ.11: ಪಟ್ಟಣದ ಅಜಾದ ನಗರದಲ್ಲಿ ಟಿಪ್ಪು ಕ್ರಾಂತಿ ಸೇನೆ ಕಾರ್ಯಕರ್ತರು ಹಾಗೂ ಕರ್ನಾಟಕ ರಾಜ್ಯ ಟಿಪ್ಪು ಅಭಿಮಾನಿಗಳ ಮಹಾವೇದಿಕೆ ವತಿಯಿಂದ ಬುಧವಾರ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಲಾಯಿತು.
ಟಿಪ್ಪು ಕ್ರಾಂತಿ ಸೇನೆಯ ಉತ್ತರ ಕರ್ನಾಟಕ ಯುವ ಘಟಕದ ಅಧ್ಯಕ್ಷ ಖಾಜಂಬರ್ ನದಾಫ್, ಟಿಪ್ಪು ಸುಲ್ತಾನ್ ದೇಶಕ್ಕಾಗಿ ತನ್ನ ಮಕ್ಕಳನ್ನೇ ವತ್ತೆ ಇಟ್ಟು ದೇಶಕ್ಕಾಗಿ ಹೊರಾಡಿದ್ದಾರೆ. ಅವರು ದೈರ್ಯಶಾಲಿಯಾಗಿದ್ದರು ಎಂದು ಹೇಳಿದರು.
ಕಾಂಗ್ರೆಸ್ ಬ್ಲಾಕ್ ಘಟಕದ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಬಸವಸೈನ್ಯ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ಪರಶುರಾಮ ಅಡಗಿಮನಿ, ಸುನೀಲಗೌಡ ಚಿಕ್ಕೊಂಡ, ಖಾಜಂಬರ್ ಚಳ್ಳಿಗಿಡದ, ಫಯಾಜ್ ತಂಬದ, ರಮಜಾನ ಹೆಬ್ಬಾಳ, ಅಬ್ದುಲ್‍ರಶಿದ ವಾಲಿಕಾರ, ಬಾಬುಲಾಲ ಹಂಚನಾಳ, ಮಹಾಂತೇಶ ಹಂಜಗಿ, ಶರಿಫ ಉಳ್ಳಾಗಡ್ಡಿ ಇದ್ದರು.