ಟಿಪ್ಪು ಸುಲ್ತಾನ್ ಸಂಘರ್ಷ ಸಮಿತಿಯಿಂದ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ

ವಿಜಯಪುರ, ನ.11-ನಗರದ ಟಿಪ್ಪು ಸುಲ್ತಾನ್ ಸಂಘರ್ಷ ಸಮಿತಿಯಿಂದ ಬುಧವಾರ ಹಜರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ಟಿಪ್ಪು ಸುಲ್ತಾನ್ ವೃತ್ತದಲ್ಲಿ ಸರಳವಾಗಿ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಮಾತನಾಡಿ, ದೇಶದ ಮೊದಲ ಸ್ವಾತಂತ್ರ್ಯಸೇನಾನಿ ಹಜರತ್ ಟಿಪ್ಪು ಸುಲ್ತಾನ್ ಅವರ ಜಯಂತಿಯನ್ನು ಬಿಜೆಪಿ ಸರಕಾರ ಸ್ಥಗಿತಗೊಳಿಸಿದ್ದು, ಬಿಜೆಪಿಯ ಕೋಮುವಾದಿತನ ತೋರಿಸುತ್ತಿದೆ. ದೇಶಕ್ಕಾಗಿ ಪ್ರಾಣವನ್ನೇ ಬಲಿ ನೀಡಿದ ಟಿಪ್ಪು ಸುಲ್ತಾನ್ ಅವರ ಜಯಂತಿಯನ್ನು ಖಾಸಗಿಯಾಗಿ ಪ್ರತಿವರ್ಷ ಆಚರಣೆ ಮಾಡಿ, ಟಿಪ್ಪು ಸುಲ್ತಾನ್ ಅವರ ಹಿರಿಮೆ, ತ್ಯಾಗವನ್ನು ಸ್ಮರಿಸಲಾಗುವುದು ಎಂದು ಘೋಷಿಸಿದರು.
ಪ್ರಗತಿಪರ ಸಂಘಟನೆಗಳ ಅಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ, ಹಜರತ್ ಟಿಪ್ಪು ಸುಲ್ತಾನ್ ದೇಶಕ್ಕಾಗಿ ತನ್ನ ಮಕ್ಕಳನ್ನು ಬ್ರೀಟಿಷರಲ್ಲಿ ಒತ್ತು ಇಟ್ಟು ಹೋರಾಡಿದ ವೀರ. ಅಂತಹ ವೀರ ಸೇನಾನಿಯ ಜಯಂತಿಯನ್ನು ಮಾಡಬೇಕಾದದ್ದು ಸರಕಾರದ ಕರ್ತವ್ಯ, ಆದರೆ ಕೋಮುವಾದಿ ಬಿಜೆಪಿ ಸರಕಾರ ಟಿಪ್ಪು ಸುಲ್ತಾನ್‍ನ ದೇಶಭಕ್ತಿಯನ್ನು ಮರೆಮಾಚಲು ಪ್ರಯತ್ನಿಸುತ್ತಿರುವುದು ಖಂಡನೀಯ. ಟಿಪ್ಪು ಸುಲ್ತಾನ್ ಸೌಹಾರ್ದ ಆಡಳಿತ, ಶೂರತನ ಎಂದಿಗೂ ಅಮರ ಎಂದು ಹೇಳಿದರು.
ನ್ಯಾಯವಾದಿ ಶ್ರೀನಾಥ ಪೂಜಾರಿ ಮಾತನಾಡಿ, ದೇಶಕ್ಕೆ ಬಹುದೊಡ್ಡ ಕೊಡುಗೆ ನೀಡಿದ ಸ್ವಾತಂತ್ರ್ಯ ಸೇನಾನಿ ಹಜರತ್ ಟಿಪ್ಪು ಸುಲ್ತಾನ್ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಮ್ಯೂನಿಷ್ಟ್ ನಾಯಕ ಸದಾನಂದ ಮೋದಿ, ಟಿಪ್ಪು ಸುಲ್ತಾನ್ ಸಂಘರ್ಷ ಸಮಿತಿ ಅಧ್ಯಕ್ಷ ಇರ್ಫಾನ್ ಶೇಖ್, ಮಹಿಳಾ ಹೋರಾಟಗಾರ್ತಿ ಸುರೇಖಾ ರಜಪೂತ, ಸ್ಲಂ ಅಭಿವೃದ್ಧಿ ಸಮಿತಿಯ ಅಕ್ರಮ ಮ್ಯಾಶಾಳಕರ, ಯುವ ಕೋರಂ ಸಮಾಜದ ಅಧ್ಯಕ್ಷ ರವೀಂದ್ರ ಜಾಧವ, ಯುವ ಮುಖಂಡ ಧನರಾಜ.ಎ, ರೈತ ಸಂಘದ ಅಧ್ಯಕ್ಷ ಕಲ್ಲಪ್ಪ ಪಾರಶೆಟ್ಟಿ, ಕಾರ್ಮಿಕ ಮುಖಂಡ ಸತಾರ ಇನಾಂದಾರ, ಕರವೇ ಅಧ್ಯಕ್ಷ ಸಾದಿಕ್ ಶೇಖ್, ಅನ್ವರ್ ಮಕಾನದಾರ, ದಲಿತ ವಿದ್ಯಾರ್ಥಿ ಪರಿಷತ್‍ನ ರಾಕೇಶ ಕುಮಟಗಿ, ತಿಪ್ಪಣ್ಣ ಕಮಲದಿನ್ನಿ, ಏಜಾಜ್ ಕಲಾದಗಿ, ನಾಸೀರ್ ನಾಗರಬೈಡಿ, ಅಬ್ದುಲ್ ರೌಫ್ ಮೌಲಾನಾ, ಇಸಾಕ್ ಲಕ್ಕುಂಡಿ, ನಜೀರ್ ತಾಳಿಕೋಟೆ, ಹಮೀರ್ ಹಮ್ಜಾ ಜಮಖಂಡಿ, ಕನ್ನಾನ್ ಮುಶ್ರೀಫ್, ಇಲಿಯಾಸ್ ಸುತಾರ, ಮಹೆಬೂಬ ಮದಭಾವಿ, ಅಕ್ಷಯ ಅಜಮನಿ, ರಫೀಕ್ ಹೆಬ್ಬಾಳ, ಹನ್ನಾನ್ ಶೇಕ್, ಸಾಹಿಲ್ ಜಮಖಂಡಿ ಸೇರಿದಂತೆ ಇತರರು ಇದ್ದರು.ಇರ್ಫಾನ್ ಶೇಖ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.