ಟಿಪ್ಪು ಸುಲ್ತಾನ್ ರಸ್ತೆ – ತ್ವರಿತಗತಿ ಕಾಮಗಾರಿಗೆ ಸೂಚನೆ

ರಾಯಚೂರು.ಡಿ.೨೬- ಟಿಪ್ಪು ಸುಲ್ತಾನ್ ರಸ್ತೆ ಕಾಮಗಾರಿ ತೀವ್ರ ಗತಿಯಲ್ಲಿ ಪೂರ್ಣಗೊಳಿಸಿ ಜನರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಗುತ್ತೇದಾರರಿಗೆ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ವೆಂಕಟೇಶ ಅವರು ತಾಕೀತು ಮಾಡಿದರು.
ಅವರಿಂದು ರಸ್ತೆ ಅಗಲೀಕರಣ ಮತ್ತು ಕಾಮಗಾರಿ ವೀಕ್ಷಿಸಿ, ಪರಿಶೀಲಿಸಿದರು. ಟಿಪ್ಪು ಸುಲ್ತಾನ್ ರಸ್ತೆ ೪೫ ಅಡಿ ಅಗಲೀಕರಣ ಮಾಡಲಾಗಿದೆ. ಎಲ್ಲಿಯೂ ಯಾವುದೇ ವ್ಯತ್ಯಾಸವಿಲ್ಲದೇ, ಅಗಲೀಕರಣ ಪ್ರಕ್ರಿಯೆ ನಡೆಯಬೇಕು ಎಂದ ಅವರು, ಈಗಾಗಲೇ ಶೇ.೮೦ ರಷ್ಟು ಚರಂಡಿ ಕಾಮಾಗಾರಿ ಪೂರ್ಣಗೊಂಡಿದೆ. ಶೇ.೨೦ ರಷ್ಟು ಪೂರ್ಣಗೊಳ್ಳಬೇಕಾಗಿದೆ. ತಕ್ಷಣವೇ ಮುಂದಿನ ೮ ದಿನಗಳಲ್ಲಿ ಈ ಕಾಮಗಾರಿ ಪೂರ್ಣಗೊಳಿಸಲು ಅಭಿಯಂತರರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನಂತರ ಇನ್ನೂ ಕೆಲ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳಬೇಕಾಗಿದೆ. ಕಾಮಗಾರಿ ವಿಳಂಬದಿಂದ ಈ ಭಾಗದ ಜನರಿಗೆ ತೀವ್ರ ತೊಂದರೆಯಾಗುತ್ತಿದೆ. ಅನಗತ್ಯ ವಿಳಂಬಕ್ಕೆ ಅವಕಾಶವಿಲ್ಲದೇ, ತ್ವರಿತಗತಿಯಲ್ಲಿ ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಹನುಮಂತು ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.