ಟಿಪ್ಪು ಸುಲ್ತಾನ್ ರಸ್ತೆ ಕಾಮಗಾರಿ ಶೀಘ್ರ ಪೂರ್ಣಕ್ಕೆ ಮನವಿ

ರಾಯಚೂರು.ಏ.07- ನಗರದ ಟಿಪ್ಪು ಸುಲ್ತಾನ ರಸ್ತೆಯ ಕಾಮಗಾರಿಯ ಬೇಗನೆ ಮುಗಿಸಲು 8ನೇ ವಾರ್ಡಿನ ನಗರಸಭೆಯ ಸದಸ್ಯರು, ಶಾಸಕ ಡಾ.ಶಿವರಾಜ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.
ಯೂಸೂಫ್ ಖಾನ್ ಮಾತನಾಡಿ, ವಾರ್ಡಿನ ವಿವಿಧ ಸಮಸ್ಯೆಗಳು ಬಹಳಷ್ಟು ಇವೆ. ಮುಸ್ಲಿಂರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಈ ವಾರ್ಡಿಗೆ ಹೆಚ್ಚಿನ ಅನುದಾನ ನೀಡುವಂತೆ ಕೋರಿದರು. ಕಾರ್ಯಾಧ್ಯಕ್ಷ ಎನ್.ಶಿವಶಂಕರ ವಕೀಲರು ಮಾತನಾಡುತ್ತಾ, ರಂಜಾನ್ ಹಬ್ಬದ ಪ್ರಯುಕ್ತ ಜನತೆಗೆ ಅನುಕೂಲ ಕಲ್ಪಿಸುವ ಸಲುವಾಗಿ ಟಿಪ್ಪು ಸುಲ್ತಾನ ರಸ್ತೆ ಸ್ವಚ್ಛಗೊಳಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡುತ್ತಾ, ನಾನು ಯಾವುದೇ ರೀತಿಯ ಪಕ್ಷ ಭೇದ ಅಭಿವೃದ್ಧಿ ವಿಷಯದಲ್ಲಿ ಮಾಡುವುದಿಲ್ಲ. ರಾಯಚೂರಿನ ಎಲ್ಲಾ ವಾರ್ಡಿನ ಅಭಿವೃದ್ಧಿಯೇ ನನ್ನ ಗುರಿ. ವಾರ್ಡ್ 8 ನೇ ಅಭಿವೃದ್ಧಿಯ ದೃಷ್ಟಿಯಿಂದ 1 ಕೋಟಿ ಅನುದಾನ ನೀಡುತ್ತೇನೆ. ಅತಿ ಶೀಘ್ರದಲ್ಲಿ ಮೋತಿ ಮಸ್ಜೀದ್ ರಸ್ತೆ ಪ್ರಾರಂಭಿಸಲಾಗುವುದು. ಟಿಪ್ಪು ಸುಲ್ತಾನ್ ರಸ್ತೆ ಕಾಮಗಾರಿಯ ಬೇಗೆನೆ ಮುಗಿಸಲು ಅಧಿಕಾರಿಗಳಿಗೆ ಸೂಕ್ತ ಆದೇಶ ನೀಡುತ್ತೇನೆಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪರಿಶಿಷ್ಟ ಘಟಕದ ಅಧ್ಯಕ್ಷ ಪಿ.ಯಲ್ಲಪ್ಪ, ಖಾಜಾ, ಬಷೀರ್ ತಾಜ್ಜವುದ್ದೀನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.