ಟಿಪ್ಪು ಸುಲ್ತಾನ್ ದೇಶಾಭಿಮಾನಿ – ಹವಾಲ್ದಾರ

ಲಕ್ಷ್ಮೇಶ್ವರ, ನ 12- ಮೈಸೂರು ಹುಲಿ ಟಿಪ್ಪು ಸುಲ್ತಾನ ಓರ್ವ ದೇಶಭಿಮಾನಿಯಾಗಿದ್ದು ಬ್ರಿಟೀಷರ ವಿರುದ್ದ ನಾಡಿನ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಧೀಮಂತ ನಾಯಕನಾಗಿದ್ದನು ಎಂದು ವೀರ ಕನ್ನಡಿಗ ಟಿಪ್ಪು ಸುಲ್ತಾನ ಸೇನೆಯ ಅಧ್ಯಕ್ಷ ಝಾಕೀರ್‍ಹುಸೇನ್ ಹವಾಲ್ದಾರ ಹೇಳಿದರು.
ಪಟ್ಟಣದಲ್ಲಿ ಟಿಪ್ಪು ಸುಲ್ತಾನ ಅವರ 270ನೇ ಜಯಂತಿ ಆಚರಿಸಿ ಅವರು ಮಾತನಾಡಿದರು. ಮೈಸೂರ ರಾಜ್ಯವನ್ನಾಳಿದ ವೀರ ಕನ್ನಡಿಗ ಟಿಪ್ಪು ಸುಲ್ತಾನ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ತರ ಪಾತ್ರವಹಿಸುವ ಮೂಲಕ ನಾಡಿನ ಇತಿಹಾಸದಲ್ಲಿ ಅಜರಾಮರವಾಗಿದ್ದಾರೆ. ಟಿಪ್ಪು ಸುಲ್ತಾನ ಓರ್ವ ದೇಶಾಭಿಮಾನಿಯಾಗಿದ್ದು ನಾಡಿನ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದು ಅವಿಸ್ಮರಣೀಯ, ಟಿಪ್ಪು ಸುಲ್ತಾನನ ಎಲ್ಲ ಧರ್ಮಗಳ ಬಗ್ಗೆ ಸಮಾನ ಒಲವು ಹೊಂದಿರುವ ದೊರೆಯಾಗಿದ್ದನು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಇಸಾಕ್ ಪತ್ತೇಖಾನವರ, ಹಜರತ್‍ಪಟೇಲ್ ಕನಕವಾಡ, ಯುನಸ್ ನಾಲಬಂದ್, ಸೋಮನಗೌಡ ಪಾಟೀಲ, ಪದ್ಮರಾಜ ಪಾಟೀಲ, ದಾದಾಪೀರ್ ಹಯಾತ್, ಇಸಾಕ್ ಕಿತ್ತೂರ, ದರವೇಶ ನಾಲಬಂದ್, ಅಬ್ದುಲ್ ಖಯಾಮ್ ಮೊದಲಾದವರು ಇದ್ದರು.
ಪೊಟೋ-ಪಟ್ಟಣದಲ್ಲಿ ವೀರ ಕನ್ನಡಿಗ ಟಿಪ್ಪು ಸುಲ್ತಾನ ಸೇನೆಯ ವತಿಯಿಂದ ಟಿಪ್ಪು ಜಯಂತಿ ಆಚರಣೆ ಮಾಡಲಾಯಿತು.