ಟಿಪ್ಪು ಸುಲ್ತಾನ್ ಜಯಂತಿ ಆಚರಣೆ

ರಾಯಚೂರು.ನ.10- ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಅಂಗವಾಗಿ ನಗರದ ಅರಬ್ ಮೊಹಲ್ಲಾ ಟಿಪ್ಪು ಸುಲ್ತಾನ್ ವೃತ್ತದಲ್ಲಿ ನಾಮಫಲಕಕ್ಕೆ ಮಾಲಾರ್ಪಣೆ ಮಾಡಿ, ಸರಳವಾಗಿ ಆಚರಿಸಲಾಯಿತು.
ಟಿಪ್ಪು ಸುಲ್ತಾನ್ ಅವರು ಈ ದೇಶದ ಸೇನಾನಿಯಾಗಿದ್ದರು. ಅವರ ಶೌರ್ಯ ಅಪ್ರತೀಮ. ಅವರ ದೇಶ ಭಕ್ತಿ ಇಂದಿಗೂ ಮಾದರಿಯಾಗಿದೆ ಎನ್ನುವ ಸ್ಮರಣೆಯೊಂದಿಗೆ ಅವರ ಜಯಂತಿ ಆಚರಿಸಲಾಯಿತು. ಶಿಕ್ಷಣ ಪ್ರೇಮಿಗಳಾದ ಫೆಡರಲ್ ಶಿಕ್ಷಣ ಸಂಸ್ಥೆಯ ಮಹ್ಮದ್ ಹೈಫಿರೋಜ್, ನ್ಯೂ ಎಜ್ಯುಕೇಷನ್ ಟ್ರಸ್ಟ್ ಕಾರ್ಯದರ್ಶಿ ಮುಜೀಬುದ್ದೀನ್, ನಗರಸಭೆ ಸದಸ್ಯರಾದ ಜೆ.ಸಾಜೀದ್ ಸಮೀರ್. ಸೈಯದ್ ದಸ್ತಗಿರಿ ಎಲ್ಲರೂ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದರು.
ಜಿಲ್ಲಾ ಕಾಂಗ್ರೆಸ್ ಯುವ ಮುಖಂಡರಾದ ರವಿ ಬೋಸರಾಜು ಅವರು, ಟಿಪ್ಪು ಸುಲ್ತಾನ್ ಜಯಂತಿ ಅಂಗವಾಗಿ ಮಾಲಾರ್ಪಣೆ ಮಾಡಿದರು. ಟಿಪ್ಪು ಸುಲ್ತಾನ್ ಅವರ ಬಗ್ಗೆ ಈ ಸಂದರ್ಭದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಡಗಿರಿ ನರಸಿಂಹಲು, ಬಿ.ರಮೇಶ, ಸಾಜೀದ್ ಸಮೀರ್, ಅಸ್ಲಾಂ ಪಾಷಾ, ತಿಮ್ಮಾರೆಡ್ಡಿ, ಸೈಯದ್ ಶಾಲಂ, ವಾಹೀದ್, ದಸ್ತಗಿರಿ, ಲಕ್ಷ್ಮಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.