ಟಿಪ್ಪು ಸುಲ್ತಾನ್ ಚೌಕ್ ಕಾಲೋನಿ ಅವ್ಯವಸ್ಥೆ ಆಗರ

ಜೇವರ್ಗಿ:ಸೆ.5: ಪಟ್ಟಣದ ಟಿಪ್ಪುಸುಲ್ತಾನ್ ಚೌಕ ಕಾಲೋನಿ ಬಡವಣೆ 3 ಮತ್ತು 4 ಬಡಾವಣೆಯ ಚರಂಡಿ ತುಂಬಿ ದುರ್ವಾಸನೆ ಬರುತ್ತಿದ್ದು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದೆ ಕೂಡಲೆ ಚರಂಡಿ ರಾಡಿ ನೀರು ತೆಗಿಬೇಕು ಎಂದು ಬಡಾವಣೆಯ ನಿವಾಸಿ ಇಂತಿಯಾಜ್ ಇನಾಮ್ದಾರ್ ಆರೋಪಿಸಿದ್ದಾರೆ ವಾರ್ಡ್ ನಂಬರ್ 3 ಸದಸ್ಯರು ಮತ್ತು ನಾಲ್ಕು ಸದಸ್ಯರು ಇತ್ತಕಡೆ ಗಮನ ಹರಿಸಬೇಕು ಸಮಸ್ಯೆ ಬಗೆಹರಿಸಬೇಕೆಂದು ಅವರು ಮನವಿ ಮಾಡಿದ್ದಾರೆ ಸಂಬಂಧಪಟ್ಟ ಪುರಸಭೆ ಅಧಿಕಾರಿಗಳು ಕೂಡಲೇ ಈ ಬಡಾವಣೆಗೆ ಬಂದು ಸಮಸ್ಯೆ ಪರಿಹಾರ ಮಾಡಬೇಕು ಇಲ್ಲದಿದ್ದರೆ ಬಡಾವಣೆ ನಿವಾಸಿಗಳ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ ಸತತವಾಗಿ ಮಳೆ ಬರುವುದರಿಂದ ನಾಲಿ ಗಳು ತುಂಬಿತುಳುಕುತ್ತಿವೆ ಮತ್ತು ರೋಗ ರುಜಿನಗಳು ಬರುತ್ತಿವೆ ಸೊಳ್ಳೆ ಕಾಟ ವಿಪರೀತವಾಗಿದೆ ಇದಕ್ಕೆ ಕಡಿವಾಣ ಯಾವಾಗ ಎಂದು ಪ್ರಶ್ನೆ ಮಾಡಿದರು ಆದ್ದರಿಂದ ಅಧಿಕಾರಿಗಳು ಮತ್ತು ಆರೋಗ್ಯ ನೈರ್ಮಲ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಬೇಕೆಂದು ಆಗ್ರಹಿಸಿದ್ದಾರೆ