ಟಿಪ್ಪು ಸುಲ್ತಾನ್ ಅಪ್ಪಟ ದೇಶ ಪ್ರೇಮಿ :ಡಾ.ಭೀಮಣ್ಣ ಮೇಟಿ

ಶಹಾಪುರ:ನ.11:ದೇಶದ ಸ್ವಾತಂತ್ರಕ್ಕಾಗಿ ಒಡಹುಟ್ಟಿದ ಎರಡು ಮಕ್ಕಳನ್ನು ಒತ್ತೆಯಿಟ್ಟ ಸ್ವಾತಂತ್ರ ವೀರ .ಇಂತಹ
ಟಿಪ್ಪು ಸುಲ್ತಾನ್ ಅಪ್ಪಟ ದೇಶ ಪ್ರೇಮಿಯಾಗಿದ್ದು ನಮಗೆ ಮಾದರಿಯಾಗಿದ್ದಾರೆ ಎಂದು
ಕಾಂಗ್ರೆಸ ಮುಖಂಡ ಡಾ.ಭೀಮಣ್ಣ ಮೇಟಿ ಹೇಳಿದರು.

ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ನಡೆದ ಟಿಪ್ಪು ಸುಲ್ತಾನ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಗತಿಪರ ರೈತ ಚಿಂತಕ ಶರಣಪ್ಪ ಸಲದಾಪುರ
ಮಾತನಾಡಿ ಟಿಪ್ಪು ಸುಲ್ತಾನ ಯುದ್ಧ ಕೌಶಲದಲ್ಲಿ ತನ್ನ ತಂದೆಯನ್ನು ಮೀರಿಸಿದವನು ಟಿಪ್ಪು. ಅತ್ಯಾಧುನಿಕ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ಬಳಕೆಯನ್ನು ಯುದ್ಧ ಭೂಮಿಯಲ್ಲಿ ಪ್ರಯೋಗಿಸುತ್ತಿದ್ದ. ಈತನ ಕಾಲದಲ್ಲಿ ತಯಾರಿಸಲಾದ ಕ್ಷಿಪಣ ಗಳು 2 ಕಿ.ಮೀ ದೂರ ಕ್ರಮಿಸಬಲ್ಲವಾಗಿದ್ದವು. ಈ ಕ್ಷಿಪಣ ಗಳು ಈಸ್ಟ್ ಇಂಡಿಯಾ ಕಂಪನಿಯನ್ನು ದಂಗುಬಡಿಸಿದ್ದವು. ಇಂತಹ ಕ್ಷಿಪಣ ಗಳನ್ನು ಫ್ರೆಂಚ್ ನೆಪೆÇೀಲಿಯನ್ ಬೋನಾಪಾರ್ಟಿ 1812ರ ಯುದ್ಧದಲ್ಲಿ ಬಳಕೆ ಮಾಡಿದ್ದನು ಎಂದು ಟಿಪ್ಪುವಿನ ಸಾಧನೆ ಕುರಿತು ಮೆಲುಕು ಹಾಕಿದರು.

ಟಿಪ್ಪು ಸುಲ್ತಾನ ಅಪ್ರತಿಮ ಸ್ವಾತಂತ್ರ ಸೇನಾನಿ, ದಕ್ಷ ಆಡಳಿತಗಾರ ಮತ್ತು
ಜಾತ್ಯತೀತನಾಗಿ ಸರ್ವರನ್ನೂ ಪೆÇರೆದ ಟಿಪ್ಪು ಸುಲ್ತಾನ್ ನಾಡಿನ ಹೆಮ್ಮೆ” ಎಂದು ಕರ್ನಾಟಕ ರಕ್ಷಾಣ ವೇದಿಕೆಯ
ಅಧ್ಯಕ್ಷ ಭೀಮಣ್ಣ ಶಖಾಪುರ ಹೇಳಿದರು.

ಮೈಸೂರನ್ನು ರಕ್ಷಿಸಲು ಬ್ರಿಟಿಷರ ವಿರುದ್ಧ ಹೋರಾಡಿದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅಪ್ಪಟ ದೇಶಭಕ್ತ.
ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಧ್ವನಿ ಎತ್ತಿದ ಆಗಿನ ಕಾಲದ ಪ್ರಮುಖ ಹೋರಾಟಗಾರರಲ್ಲಿ ಒಬ್ಬರು. ಯುದ್ಧದಲ್ಲಿ ರಾಕೆಟ್ ತಂತ್ರಜ್ಞಾನ, ಮೈಸೂರು ರಾಜ್ಯಕ್ಕೆ ರೇಷ್ಮೆಯನ್ನು ಪರಿಚಯಿಸಿದರು. ಇಂತಹ ಉದಾತ್ತ ವ್ಯಕ್ತಿತ್ವದ ಟಿಪ್ಪು ಜಯಂತಿ ಆಚರಿಸುವುದನ್ನು ವಿರೋಧಿಸುವುದು ರಾಜಕೀಯಪ್ರೇರಿತವಾಗಿದೆ. ನಿಜವಾದ ದೇಶಭಕ್ತನನ್ನು ಮತಾಂಧ ಎನ್ನುವುದು, ಶಾಲಾ ಪಠ್ಯದಿಂದ ಅವರ ಕುರಿತ ಪಠ್ಯವನ್ನು ಕೈಬಿಡುವುದು ದುರದುಷ್ಟಕರ. ಸತ್ಯಕ್ಕಾಗಿ ಟಿಪ್ಪು ಬಗ್ಗೆ ಮತ್ತೊಮ್ಮೆ ಸಂಶೋಧನೆ ನಡೆಯಲಿ’ ಎಂದು ಶರಣು ಕಸನ್ ದೋರನಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು.

,ಹಣಮೆ ಗೌಡ ಬಿರನಕಲ್ ,ಅಲ್ಲಿಪೂರ ಮೌಲಾಲಿ,ಶರಣಪ್ಪ ಸಲದಾಪುರ,ಭೀಮಣ್ಣ ಶಖಾಪುರ,ಷಣ್ಮುಖಪ್ಪ ಕಕ್ಕೇರಿ,ಮಾನಪ್ಪ ಹುಲಸೂರು,ಶರಣು ಕಸನ್,ನಿಜಗುಣ ಪೂಜಾರಿ,ರಾಜು ಜಮಾದರ,ಖಾಜೆಸಾಬ್ ಮಠ,ಹಣಮಂತ ಶಹಾಪುರ,ತಾಯಮ್ಮ ತೆಗನೂರು,ಚಂದ್ರಾವತಿ,ವಿಜಯ ಮಲಗೊಂಡ,ಪರಮಣ್ಣ ಸುರಪುರ,ಮಹಾದೇವಪ್ಪ ಹುಡೇದ,ಭೀಮಾಶಂಕರ ಅಣಬಿ,ಪರಮಣ್ಣ ಆಂದೇಲಿ ಮುಂತಾದ ಮುಖಂಡರಿದ್ದರು.