ಟಿಪ್ಪು ನಿಜ ಕನಸುಗಳು ನಾಟಕ ಪ್ರದರ್ಶನ

ಕೋಲಾರ, ಮಾ.೫- ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ರಂಗಾಯಣ ಮೈಸೂರು ಪ್ರಸ್ತುತ ಪಡಿಸುವ ಟಿಪ್ಪು ನಿಜ ಕನಸುಗಳು ನಾಟಕವನ್ನು ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಮಾ ೭ರಂದು ಸಂಜೆ ೬ ಗಂಟೆಗೆ ಆಯೋಜಿಸಲಾಗಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಮೈಸೂರು ರಂಗಾಯಣ ಕಳೆದ ೩೩ ವರ್ಷಗಳ ಹಿಂದೆ (ದಿವಂಗತ)ಬಿ.ವಿ.ಕಾರಂತರ ನಿರ್ದೇಶನದಲ್ಲಿ ಭಾರತದ ಸಂಸ್ಕೃತಿಯ ಚಟುವಟಿಕೆಗಳ ಇತಿಹಾಸಕ್ಕೆ ಸಂಬಂಧಿಸಿದಂತೆ ಹಲವಾರು ವಿಶಿಷ್ಠ ರಂಗ ಪ್ರಯೋಗಗಳ ಮೂಲಕ ರಂಗಾಸಕ್ತರ ಮನೆ ಮಾತಾಗಿದೆ ಎಂದರು.
ಟಿಪ್ಪು ನಿಜಕನಸುಗಳು ರಾಜ್ಯದಲ್ಲಿ ೪೨ನೇ ಪ್ರದರ್ಶನವಾಗುತ್ತಿದೆ. ಬೆಂಗಳೂರಿನ ರವಿಂದ್ರ ಕಲಾ ಕ್ಷೇತ್ರದಲ್ಲಿ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಉಚಿತವಾಗಿ ಪ್ರದರ್ಶನ ನಡೆಸಬಾರದು ಎಂಬ ದೆಸೆಯಲ್ಲಿ ೧೦೦ ರೂ ಟಿಕೆಟ್ ಬೆಲೆ ನಿಗಧಿ ಪಡೆಸಲಾಗಿದೆ. ಪ್ರತಿಯೊಂದು ಪ್ರದರ್ಶನವು ಯಶಸ್ವಿಯಾಗಿದೆ ಎಂದು ಹೇಳಿದರು,
ಟಿಪ್ಪು ನಿಜಕನಸುಗಳು ನಾಟಕದ ಮುಖ್ಯ ಉದ್ದೇಶವು ಸತ್ಯ ಚರಿತ್ರೆಯ ಅನಾವರಣ ಅಗಿದೆ.ಪರ್ಷಿಯನ್ ಮೂಲದ ಹೈದರಾಲಿ ಮಗ ಟಿಪ್ಪು ಸುಲ್ತಾನರ ಬಗ್ಗೆ ಅತಿರಂಜಿತವಾಗಿ ಸುಳ್ಳು ಚರಿತ್ರೆಗಳನ್ನು ನಿರ್ಮಿಸಿ ಭಾರತೀಯ ಸಂಸ್ಕೃತಿಯ ಮೇಲೆ ನಡೆಸಿರುವಂತ ಕೆಲವು ಮುಸ್ಲಿಂ ದೊರೆಗಳ ಅಕ್ರಮಕಾರಿ ಕೃತ್ಯಗಳನ್ನು ಮುಚ್ಚಿಟ್ಟು ಇತಿಹಾಸಕಾರರ ಚರಿತ್ರೆಯನ್ನು ತಿರುಚಿ ಪಠ್ಯ ಪುಸ್ತಕಗಳಲ್ಲಿ ಅಳವಡಿಸುವ ಮೂಲಕ ಸುಳ್ಳನ್ನು ಸತ್ಯ ಮಾಡಲು ಪ್ರಯತ್ನಿಸಲಾಗಿದೆ. ರಂಗಯಾಣ ಟಿಪ್ಪು ನಿಜಕನಸುಗಳ ಮೂಲಕ ಮುಂದಿನ ಪೀಳಿಗೆಗೆ ವಾಸ್ತಾವಾಂಶ ತಿಳಿಸುವ ಉದ್ದೇಶವನ್ನು ಹೊಂದಲಾಗಿದೆ ಹೊರತಾಗಿ ಯಾವೂದೇ ಜಾತಿ, ಧರ್ಮ, ಯಾವೂದೇ ಪಕ್ಷದ ಪರವಾಗಲಿ,ಅಥವಾ ವಿರುದ್ದವಾಗಿ ಅಲ್ಲ.ನನ್ನೊಂದಿಗೆ ಸಮಾನ ಮನಸ್ಕರನ್ನು ಇಟ್ಟು ಕೊಂಡು ಈ ಪತ್ರಿಕಾ ಗೋಷ್ಠಿ ನಡೆಸಲಾಗುತ್ತಿದೆ ಹೊರತು ಚುನಾವಣೆಗೂ ನಮಗೂ ಯಾವೂದೇ ಸಂಬಂಧವಿಲ್ಲ ಎಂದು ಸ್ವಷ್ಟಪಡೆಸಿದರು,
ಈ ನಾಟಕವನ್ನು ಪ್ರದರ್ಶನ ಮಾಡ ಬಾರದು ಎಂದು ಸಚಿವ ರೆಹಮಾನ್‌ಖಾನ್ ಎಂಬುವರು ತಡೆಯಾಜ್ಞೆ ತಂದಿದ್ದರು. ಇದನ್ನು ಸಂಬಂಧ ಪಟ್ಟ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಮೂಲಕ ತೆರವು ಮಾಡಲಾಯಿತು,ನಂತರದಲ್ಲಿ ಅವರು ಪ್ರಕರಣವನ್ನು ವಾಪಾಸ್ ಪಡೆದರು ಎಂದು ಹೇಳಿದರು,
ಜ್ಞಾನಪೀಠ ಪುರಸ್ಕೃತ ಗಿರೀಶ್ ಕಾರ್ನಾಡ್ ಅವರು ಕಳೆದ ೨೫ ವರ್ಷಗಳ ಹಿಂದೆ ಟಿಪ್ಪು ಕನಸಿನ ನಾಟಕವನ್ನು ರಚಿಸಿದ್ದರು ಟಿಪ್ಪುವನ್ನು ಶೊರ ಧೀರ ದೇಶಪ್ರೇಮಿ, ಬ್ರಿಟಿಷರ ವಿರುದ್ದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ವಿಶ್ವಧರ್ಮ ಪ್ರೇಮಿ ಮುಸ್ಲಿಂ ಧರ್ಮದವರು ಅಗಿದ್ದರೂ ಸಹ ಹಿಂದು ದೇವಾಲಯಗಳಿಗೆ ,ಮಠಗಳಿಗೆ ಉದಾರವಾಗಿ ದಾನ ದತ್ತಿ ಜಾತ್ಯಾತೀತವಾದಿ ಎಂದೆಲ್ಲಾ ಓಟ್ ಬ್ಯಾಂಕ್ ನಿರ್ಮಾತರು ಡೊಂಗಿ ಬುದ್ದಿಜೀವಿಗಳು ಕೋಟೆಯನ್ನು ನಿರ್ಮಿಸಿದ್ದಾರೆ ಎಂದರು.
ಮೈಸೂರು ಸಂಸ್ಥಾನದ ಕನ್ನಡ ಭಾಷೆಯ ಬದಲಾಗಿ ಪರ್ಷೀಯನ್ ಭಾಷೆಯನ್ನು ಆಡಳಿತಕ್ಕೆ ತಂದರು, ಹಳೆಯ ಕಂದಾಯದ ಹೆಸರುಗಳನ್ನು ಬದಲಿಸಿ ಇಸ್ಲಾಮಿಕ್ ಹೆಸರುಗಳನ್ನು ನಾಮಕರಿಸಿದ್ದನ್ನು ಮುಚ್ಚಿಡಲಾಗಿದೆ. ಅನೇಕ ಸತ್ಯಾಂಶಗಳ್ನು ಬಚ್ಚಿಡಲಾಗಿದೆ. ವಾಸ್ತವಾಂಶಕ್ಕೆ ದೂರವಾಗಿ ಸುಳಿನ ಕಪೋಕಲ್ಪಿತವಾಗಿತ್ತು ಎಂದು ಪ್ರತಿಪಾದಿಸಿದರು.
ಸತ್ಯಾಂಶವನ್ನು ಹೊರ ತೆಗೆದು ವಾಸ್ತವಾಂಶವನ್ನು ಜನತೆಯ ಮುಂದಿಡಲು ಹಲವು ಇತಿಹಾಸಗಾರರ ಡಾ.ಊ.ಮಾ,ಮುತ್ತಣ್ಣ, ಆರ್.ಡಿ.ಶರ್ಮಾ, ಡಾ. ಚಿದಾನಂದಮೂರ್ತಿಯುವರು ರಚಿಸಿರುವಂಥ ಗ್ರಂಥಗಳನ್ನು ವಿಶೇಷವಾಗಿ ಟಿಪ್ಪುವಿನ ಕಾಲದ ಇತಿಹಾಸಕಾರ ಹುಸೇನ್ ಆಲಿ ಕಿರ್ಮಾನಿ ರಚಿಸಿರುವ ಹೈದರ ನಿಶಾನಿ ಕೃತಿಗಳು, ಟಿಪ್ಪು ಪರ್ಷಿಯನ್ ಬಾಷೆಯಲ್ಲಿ ಬರೆದಿರುವ ಪತ್ರಗಳು ಡಾ.ಕೆ.ಎಂ.ಫಣಿಕ್ಕರ್ ಬ್ರಿಟಿಷರ ಗ್ರಂಥಾಲಯದಿಂದ ಪಡೆದು ಮಲೆಯಾಳಂ ಭಾಷೆಗೆ ಹಾಗೂ ಸಂಶೋಧಕ ಡಾ.ಚಿದಾನಂದ ಮೂರ್ತಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಟಿಪ್ಪು ಸ್ವತಃ ಬರೆದಿರುವ ಪತ್ರಗಳೇ ಅತನ ನಿಜವಾದ ಕನಸುಗಳಾಗಿದೆ ಎಂದು ವಿವರಿಸಿದರು.
ಪ್ರಶ್ನೆಯೊಂದಕ್ಕೆ ಕೊಡಗಿನಲ್ಲಿ ಮತಾಂತರ, ದೇವಾಸ್ಥಾನಗಳ ಧ್ವಂಸ, ಮೇಲು ಕೋಟೆಯಲ್ಲಿ ಅಯ್ಯಂಗರರ ಹತ್ಯೆ, ಕೊಡವರನ್ನು ಮತ್ತು ಕ್ರೈಸ್ತರ ಮತಾಂತರ ಮಾಡಿದ್ದು, ಮಹಿಳೆಯರ ಮೇಲೆ ಧೌರ್ಜನ್ಯಗಳು, ಅತ್ಯಾಚಾರಗಳು ಯಾವೂದೇ ಭಯೋತ್ಪಾದಕ ರನ್ನು ಮೀರಿಸುವಂತೆ, ತಾಲಿಭಾನ್‌ಗಳಿಗೂ ಮೀರುವಂತೆ ಟಿಪ್ಪು ದಬ್ಬಾಳಿಕೆ ಮಾಡಿರುವುದೆಲ್ಲಾವನ್ನು ಮರೆಮಾಚಲಾಗಿದೆ. ಅನೇಕ ದೇವಾಲಯಗಳನ್ನು ಕೆಡವಿ ಮಸೀದಿ ಗಳನ್ನು ಕಟ್ಟಲಾಗಿದೆ. ಅದರೆ ಇದಕ್ಕೆ ವಿರುದ್ದುವಾಗಿ ಟಿಪ್ಪುವನ್ನು ಕೊಂಡಾಡಲಾಗಿದೆ ಎಂದು ಹೇಳಿದರು,
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಡಾ.ವೇಣುಗೋಪಾಲ್ ಬಿಜೆಪಿ ವಕ್ತಾರ ಎಸ್.ಬಿ.ಮುನಿವೆಂಕಟಪ್ಪ,, ಕೆ.ಯು.ಡಿ.ಎ. ಮಾಜಿ ಆದ್ಯಕ್ಷ ಓಂಶಕ್ತಿ ಚಲಪತಿ, ಬಿಜೆಪಿ ಮುಖಂಡ ಸಾಮಾ ಬಾವು ಉಪಸ್ಥಿತರಿದ್ದರು,