ಟಿಪ್ಪು ಜಯಂತಿ ಆಚರಣಿ


ಹುಬ್ಬಳ್ಳಿ, ನ 12: ಇಲ್ಲಿನ ಅಲ್ತಾಫ್‍ನಗರ ಯಂಗ್ ಕಮೀಟಿ ವತಿಯಿಂದ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಮೌಲಾನಾ ಅಬ್ದುಲ್ ಹಕ್ಕಿಮ ಅವರು ಫಾತ್ಯಾಖಾನಿ ಮಾಡಿ ಆರಂಭಿಸಿದರು. ನೆರೆದಿದ್ದ ಸಾರ್ವಜನಿಕರಿಗೆ ಸಿಹಿ ಹಂಚಲಾಯಿತು.
ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಹಿರಿಯ ಸದಸ್ಯರು ಹಾಗೂ ಅಂಜುಮನ್-ಇ-ಇಸ್ಲಾಂ ಸಂಸ್ಥೆಯ ಉಪಾಧ್ಯಕ್ಷರಾದ ಅಲ್ತಾಫ್ ನವಾಜ ಎಂ. ಕಿತ್ತೂರ ಅವರು ಮಾತನಾಡಿ, ಟಿಪ್ಪು ಸುಲ್ತಾನ್ ಧೀರ ಸ್ವಾತಂತ್ರ್ಯ ಹೋರಾಟಗಾರರಾಗಿದ್ದು, ಬ್ರಿಟೀಷರ ವಿರುದ್ಧ ಹೋರಾಡಿದ್ದರು. ದೇಶಕ್ಕಾಗಿ ಹೋರಾಡಿ ಶಹೀದ್ ಆದರು. ಮೈಸೂರು ಹುಲಿ ಎಂದೇ ಪ್ರಖ್ಯಾತಿಯನ್ನು ಪಡೆದಿದ್ದರು ಎಂದು ಗುಣಗಾನ ಮಾಡಿದರು.
ಈ ಸಂದರ್ಭದಲ್ಲಿ ಮೌಲಾನಾ ಅಬ್ದುಲ್ ಹಕ್ಕಿಮ, ಅಲಾಬಕಶ ಸವಣೂರ, ಎ.ಎ. ಮಸೂತಿ, ಆಸಿಫ್ ಸಲಾ, ಫಕ್ರುದ್ದೀನ ಧಾರವಾಡ, ಮಹ್ಮದಸಾಬ ಸಗರಿ, ದಾವಲಸಾಬ ಮುಲ್ಲಾ, ಮಹ್ಮದ ಹನೀಫ ಅಣ್ಣಿಗೇರಿ, ಸಲೀಮ ಪಲಾ, ಅಬ್ಬಾಸ ಮುಕಾಸಿ, ಸರ್ಫರಾಜ ಕಿತ್ತೂರ, ರಫೀಕ ಕಾರಿಗಾರ, ಜಾವೇದ ಕೊಲಾಪೂರ ಅನೇಕರು ಉಪಸ್ಥಿತರಿದ್ದರು.