ಟಿಪ್ಪು ಅಪ್ರತೀಮ ದೇಶ ಭಕ್ತ- ಹಂಪಯ್ಯನಾಯಕ

ಸಿರವಾರ.ನ,೧೦- ಬ್ರಿಟೀಷರಿಗೆ ಸಿಂಹಸ್ವಪ್ನ ಆಗಿದ ಟಿಪ್ಪು ಸುಲ್ತಾನ್ ಅಪ್ರತೀಮ ದೇಶ ಭಕ್ತ, ಅವರನ್ನು ಮುಸ್ಲಿಂ ಎಂದು ಕೇಲವರು ವಿರೋಧಿಸುತ್ತಿರುವುದು ಸರಿಯಾದ ಕ್ರಮವಲ್ಲ, ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದಾಗ ಟಿಪ್ಪು ಜಯಂತಿಯನ್ನು ಸರ್ಕಾರದಿಂದ ಆಚರಿಸುವಂತೆ ಜಾರಿಗೆ ತರಲಾಗಿತು ಎಂದು ಮಾಜಿ ಶಾಸಕ ಜಿ.ಹಂಪಯ್ಯನಾಯಕ ಹೇಳಿದರು.
ಟಿಪ್ಪು ಸುಲ್ತಾನ್ ಜಯಂತಿ ಅಂಗವಾಗಿ ಪಟ್ಟಣದ ಟಿಪ್ಪು ಸುಲ್ತಾನ ನಾಮಪಲಕಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು ಬ್ರಿಟಿಷರ ನಿದ್ದೆ ಗೆಡಿಸಿದ್ದ ಟಿಪ್ಪು ಆಸ್ಥಾನದಲ್ಲಿ ದೀವಾನರಾಗಿದ್ದವರು, ಮಂತ್ರಿಗಳಾಗಿದ್ದವರು ಹಿಂದುಗಳೇ. ಉಳುವವನೇ ಭೂ ಒಡೆಯ ಕಾನೂನನ್ನು ಮೊದಲಿಗೆ ಜಾರಿಗೆ ತಂದಿದ್ದು ಹೈದರಾಲಿ. ಕನ್ನಂಬಾಡಿ ಕಟ್ಟೆಗೆ ಅಡಿಗಲ್ಲು ಹಾಕಿದ್ದು ಟಿಪ್ಪು. ಶೃಂಗೇರಿ ಸೇರಿ ಹಲವು ಮಠ, ಮಂದಿರಗಳಿಗೆ ಟಿಪ್ಪು ರಕ್ಷಣೆ, ನೆರವು ನೀಡಿರುವುದಕ್ಕೆ ಅಪಾರ ದಾಖಲೆಗಳಿವೆ. ಟಿಪ್ಪು ಎಲ್ಲೆಲ್ಲಿ ಮಸೀದಿ ಕಟ್ಟಿಸಿದ್ದರೋ ಅದರ ಪಕ್ಕದಲ್ಲೇ ದೇವಸ್ಥಾನಗಳನ್ನೂ ಕಟ್ಟಿಸುತ್ತಿದ್ದರು ಎನ್ನುವುದು ಇತಿಹಾಸ ಪುಟ್ಟಗಳಲ್ಲಿ ದಾಖಲೆ ಆಗಿದೆ ಎಂದರು. ಜೆಡಿಎಸ್ ಹಿರಿಯ ಮುಖಂಡ ಜಿ.ಲೋಕರೆಡ್ಡಿ ಮಾತನಾಡಿ ಮೈಸೂರನ್ನು ರಕ್ಷಿಸಲು ಬ್ರಿಟಿಷರೊಂದಿಗೆ ಹೋರಾಡಿದನು.
ಬ್ರಿಟಿಷರೊಂದಿಗೆ ಹೋರಾಡಲು ನೆಪೋಲಿಯನ್ನನ ನೆರವನ್ನು ಪಡೆಯಲು ಪ್ರಯತ್ನಿಸಿದನು.
ಯುದ್ಧದಲ್ಲಿ ರಾಕೆಟ್ ತಂತ್ರಜ್ಞಾನ ಪರಿಚಯಿಸಿದ ಮೊದಲ ವ್ಯಕ್ತಿ.
ಮೈಸೂರು ರಾಜ್ಯಕ್ಕೆ ರೇಷ್ಮೆಯನ್ನು ಪರಿಚಯಿಸಿದರು,ಕುಣಿಗಲ್‌ನಲ್ಲಿ ಕುದುರೆ ಫಾರಂ ಸ್ಥಾಪಿಸಿದರು,
ದಲಿತರ ಮೇಲಿನ ಬಹಿಷ್ಕಾರವನ್ನು ತೊಡೆದು ಹಾಕಿದನು.
ಭೂ ಕಂದಾಯ ನೀತಿಯನ್ನು ಜಾರಿಗೆ ತಂದಿದರು ಎಂದರು. ಹಿರಿಯ ಮುಖಂಡ ಚುಕ್ಕಿ ಸೂಗಪ್ಪ ಸಾಹುಕಾರ, ಪ.ಪಂ ಸದಸ್ಯ ಕೃಷ್ಣನಾಯಕ ಮಾತನಾಡಿದರು.
ಈ ಸಂದರ್ಭದಲ್ಲಿ ರಮೇಶದರ್ಶನಕರ್, ಶಿವಶರಣಸಾಹುಕಾರ ಅರಕೇರಿ,ಪ.ಪಂ ಸದಸ್ಯರಾದ ವೈ ಭೂಪನಗೌಡ, ಹಸೇನ್ ಅಲಿಸಾಬ್, ಮೌಲಾಸಾಬ ವರ್ಚಸ್, ಹಾಜಿ ಚೌದ್ರಿ, ಸೂರಿ ದುರುಗಣ್ಣನಾಯಕ, ಅಜೀತ್ ಹೊನ್ನಟಗಿ, ಬಂದೇನವಾಜ್, ಗ್ಯಾನಪ್ಪ, ಚನ್ನಪ್ಪ ನಾಗೋಲಿ, ಬಸವರಾಜಗಡ್ಲ, ಪ.ಪಂ ಮಾಜಿ ಉಪಾದ್ಯಕ್ಷ ಚನ್ನಬಸವ ಗಡ್ಲ,ಇರ್ಪಾನ್ ಬಢಾಘರ, ಅರಳಪ್ಪಯದಲದಿನ್ನಿ, ಮಲ್ಲಪ್ಪ,ವೆಂಕಟೇಶ ದೊರೆ,ಮನೋಹರ, ರಾಜಾ, ಶರಿಪ್, ಟಿಪ್ಪು ಸುಲ್ತಾನ ಸಂಘದ ಅದ್ಯಕ್ಷ ಎಂ.ಡಿ.ವಾಹೀದ್, ಗೌರವ ಅದ್ಯಕ್ಷ ಶಾಲಂಖಾಸ್ಮೀರಿ, ಉಪಾದ್ಯಕ್ಷ ರಜಾಕ್, ಮಹಿಬೂಬ್ ಸೇರಿದಂತೆ ಇನ್ನಿತರರು ಇದ್ದರು.