
ವಿಜಯಪುರ,ಮೇ 26:ಬೈಕ್‍ಗೆ ಟಿಪ್ಪರ್ ಡಿಕ್ಕಿಯಾಗಿರುವ ಪರಿಣಾಮ ಇಬ್ಬರು ಸ್ಥಳದಲ್ಲೇ ದುರ್ಮರಣ ಹೊಂದಿ ಇಬ್ಬರು ಗಾಯಗೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಶರಣಮ್ಮ ಕಂಬಳಿ, ನಾಗೇಶ ಶಿವಪೂರೆ ಮೃತಪಟ್ಟಿರುವ ದುರ್ದೈವಿಗಳು. ಅಲ್ಲದೇ, ಆರು ಮತ್ತು ಎಂಟು ವರ್ಷದ ಎರಡು ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದಾರೆ. ಮೃತಪಟ್ಟಿರುವ ದುರ್ದೈವಿಗಳ ದೇಹಗಳು ಛಿದ್ರಗೊಂಡಿವೆ.ಅತಿ ವೇಗದಿಂದ ವಾಹನ ಚಲಾಯಿಸುವ ಸಂದರ್ಭದಲ್ಲಿ ಅವಘಡ ಸಂಭವಿಸಿದೆ ಎಂದು ಪೆÇಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮುದ್ದೇಬಿಹಾಳ ಪೆÇಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.