ಟಿಪ್ಪರ್-ಬೈಕ್‌ಡಿಕ್ಕಿ ಬೈಕ್‌ಸವಾರ ಸಾವು

ಪುತ್ತೂರು, ನ.೪- ಉಪ್ಪಿನಂಗಡಿ ಕಡಬ ರಸ್ತೆಯ ಪುಳಿತ್ತಡಿ ಎಂಬಲ್ಲಿ ಟಿಪ್ಪರ್ ಹಾಗೂ ಬೈಕ್ ಡಿಕ್ಕಿ ಸಂಭವಿಸಿ ಬಜತ್ತೂರು ಗ್ರಾಮದ ನಾಗೋಜಿ ನಿವಾಸಿ ಚೆನ್ನಪ್ಪ ಗೌಡ ಅವರ ಪುತ್ರ ನಾರಾಯಣ ಗೌಡ (೪೪) ಅವರು ಮೃತಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ.
ಉಪ್ಪಿನಂಗಡಿಯಿಂದ ತನ್ನ ಮನೆಗೆ ಹೋಗುತ್ತಿದ್ದ ಅವರ ಬೈಕ್‌ಗೆ ಪುಳಿತ್ತಡಿ ಪದಾಳ ಎಂಬಲ್ಲಿ ಕೇರಳ ನೋಂದಣಿ ಹೊಂದಿರುವ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಗೆ ಒಯ್ಯುವ ಸಂದರ್ಭದಲ್ಲಿ ಅವರು ಮೃತಪಟ್ಟಿದ್ದಾರೆ. ನಾಲ್ಕು ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದ ಅವರು ಮಣಿಕ್ಕಳ ಬೈಲಿನ ನಾಗೋಜಿ ಎಂಬಲ್ಲಿ ಕೃಷಿಕರಾಗಿದ್ದರು. ಮೃತರು ತಂದೆ, ತಾಯಿ, ಸಹೋದರ. ಪತ್ನಿ ಇಂದಿರಾ ಹಾಗೂ ೪ ವರ್ಷದ ಗಂಡು ಮಗನನ್ನು ಅಗಲಿದ್ದಾರೆ. ಸ್ಥಳಕ್ಕೆ ಪುತ್ತೂರು ಸಂಚಾರಿ ಠಾಣೆಯ ಎಸೈ ರಾಮ ನಾಯ್ಕ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದೇರಣ್ಣ ಗೌಡ ಓಮಂದೂರು ಅವರ ದೂರಿ
ನಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.