ಟಿಪ್ಪರ್ ಪಲ್ಟಿ: ಚಾಲಕ ಮೃತ್ಯು

ಪಡುಬಿದ್ರಿ, ಜೂ.೭- ಟಿಪ್ಪರ್ ಮಗುಚಿ ಬಿದ್ದು ಚಾಲಕ ಸ್ಥಳದಲ್ಲೇ ಮೃತಪಟ್ಟ ಧಾರುಣ ಘಟನೆ ಪಡುಬಿದ್ರಿ ಸಮೀಪದ ನಂದಿಕೂರು-ಮುದರಂಗಡಿ ರಸ್ತೆಯಲ್ಲಿ ನಡೆದಿದೆ.


ಮೃತರನ್ನು ಪಕ್ಷಿಕೆರೆ ನಿವಾಸಿ ಹರೀಶ್ ಕೋಟ್ಯಾನ್ (೩೭) ಎಂದು ಗುರುತಿಸಲಾಗಿದೆ. ನಂದಿಕೂರು ಇಂಡಸ್ಟ್ರಿಯಲ್ ಎಸ್ಟೇಟ್ಗೆತ ಟಿಪ್ಪರ್ ನಲ್ಲಿ ಮಣ್ಣು ಸಾಗಿಸುತ್ತಿದ್ದರು. ಮಣ್ಣನ್ನು ಖಾಲಿ ಮಾಡುತ್ತಿರುವ ವೇಳೆ ಟಿಪ್ಪರ್ ಹರೀಶ್ ಮೇಲೆ ಮಗುಚಿ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇವರು ಈ ಮೊದಲು ಬಸ್ಸು ಚಾಲಕನಾಗಿ ದುಡಿಯು ತ್ತಿದ್ದರು ಎನ್ನಲಾಗಿದೆ. ಮೃತರು ತಂದೆ, ತಾಯಿ, ಪತ್ನಿ, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.