ಟಿಪ್ಪರ್ ಡಿಕ್ಕಿ ಹೊಡೆದು ಇಬ್ಬರು ಬೈಕ್ ಸವಾರರ ಸಾವು

ಚಾಮರಾಜನಗರ, ಜ. 9- ಟಿಪ್ಪರ್ ಡಿಕ್ಕಿ ಹೊಡೆದು ಇಬ್ಬರು ಬೈಕ್ ಸವಾರರು ಸಾವನಪ್ಪಿರುವ ಘಟನೆ ನಗರ್ಲ್ಲಿ ನೆಡೆದಿದೆ.
ಇಲ್ಲಿನ ಸತ್ಯಮಂಗಲ ರಸ್ತೆಯಲ್ಲಿನ ಪೆಟ್ರೋಲ್ ಬಂಕ್ ಬಳಿ ಬೈಕ್ ಗೆ ಡಿಕ್ಕಿ ಹೊಡೆದ ಟಿಪ್ಪರ್ ಇಬ್ಬರು ಬೈಕ್ ಸವಾರರ ತಲೆ ಮೇಲೆ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ಚಾಮರಾಜನಗರ ತಾಲೋಕು ಬ್ಯಾಡಮೂಡ್ಲು ಗ್ರಾಮದ ಮಣಿ ಮತ್ತು ನಟರಾಜು ಎಂದು ಗುರುತಿಸಲಾಗಿದೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು.ಟಿಪ್ಪರ್ ಹಾಗು ಚಾಲಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ
ಚಾಮರಾಜನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.