ಟಿಪ್ಪರ್-ಟ್ರ್ಯಾಕ್ಸ್ ಮುಖಾಮುಖಿ ಡಿಕ್ಕಿ: ಮಹಿಳೆ ಸೇರಿ ಇಬ್ಬರು ಸಾವು

ರಾಯಚೂರು ಏ 19:- ರಾಯಚೂರು ಮತ್ತು ಹೈದ್ರಾಬಾದ್ ರಾಷ್ಟ್ರೀಯ ಹೆದ್ದಾರಿಯ ಚಿಕ್ಕಸೂಗೂರು ಬಳಿ ಟಿಪ್ಪರ್ ಮತ್ತು ಟ್ರ್ಯಾಕ್ಸ್ ಮಧ್ಯ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಮಹಿಳೆ ಸೇರಿದಂತೆ ಇಬ್ಬರು ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ನಡೆದಿದೆ.
ಮೃತರನ್ನು ದೇವಸೂಗೂರು ಗ್ರಾಮದ ಆರ್.ಟಿ.ಪಿ.ಎಸ್ ನಿವೃತ್ತ ನೌಕರ ಚನ್ನಪ್ಪ ಮತ್ತ ಅವರ ಸಹೋದರಿ ಎಂದು ಗುರುತಿಸಲಾಗಿದೆ.
ಟ್ರ್ಯಾಕ್ಸ್ ನಲ್ಲಿ ಇದ್ದ ಉಳಿದವರಲ್ಲಿ ಮತ್ತೊಬ್ಬ ಮಹಿಳೆ ತೀವ್ರ ಗಾಯಗೊಂಡಿದ್ದಾರೆ.
ಚನ್ನಪ್ಪ ಅವರ ಮಗನ ಮದುವೆಗೆ ಬಂಗಾರ ಮತ್ತು ಇತರೆ ವಸ್ತು ಗಳನ್ನು ರಾಯಚೂರು ನಗರದಲ್ಲಿ ಖರೀದಿಸಿದ ನಂತರ ದೇವಸೂಗೂರಿಗೆ ಹಿಂದುರುಗುವಾಗ ಈ ಘಟನೆ ನಡೆದಿದೆ.
ದೇವಸೂಗೂರುನಿಂದ ಬರುತ್ತಿರುವ ಟಿಪ್ಪರ್ ಮತ್ತು ಜೀಪ್ ಮಧ್ಯ ಡಿಕ್ಕಿಯಿಂದ ಟ್ರ್ಯಾಕ್ಸ್ ಮುಂಭಾಗ ಮುದ್ದೆಯಾಗಿದೆ.