ಟಿಪ್ಪರಗಳ ಹಾವಳಿ ಹದಗೆಟ್ಟ ಗೂಗಲ್ ರಸ್ತೆ

ಗಬ್ಬೂರು,ಮೇ.೨೪-
ದೇವದುರ್ಗ ತಾಲೂಕಿನ ಗಬ್ಬೂರು ಹೋಬಳಿಯ ರಸ್ತೆಯಲ್ಲಿ ಬರುವ ಗಬ್ಬೂರು ಹೃದಯ ಭಾಗದಲ್ಲಿ ಹಾದು ಹೋಗುವ ಗೂಗಲ್ ರಸ್ತೆ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿರುವ ಟಿಪ್ಪರಗಳ ಹಾವಳಿಗೆ ಸಂಪೂರ್ಣವಾಗಿ ರಸ್ತೆ ಕೆಟ್ಟು ಹೋಗಿದೆ.ಯಾವುದೇ ಪರವಾನಿಗೆ ಪಡೆಯದೆ ಅಕ್ರಮ ಮರಳು ಸಾಗಾಟ ನಡೆಯುತ್ತಿದ್ದು,ಗೂಗಲ್ ಮಾರ್ಗವಾಗಿ ಓಡಾಡುವ ಟಿಪ್ಪರಗಳು ಜನರು ರಸ್ತೆಯಲ್ಲಿ ಓಡಾಡಲು ಭಯಭೀತರಾಗಿದ್ದಾರೆ.
ಹಗಲು-ರಾತ್ರಿಯೆನ್ನದೆ ಟಿಪ್ಪರಗಳ ಹಾವಳಿ ಹೆಚ್ಚಾಗಿದ್ದು ಕಡಿವಾಣ ಹಾಕುವಲ್ಲಿ ಅಧಿಕಾರಿಗಳು ಮೌನವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕೂಡಲೇ ಸಂಬಂಧಪಟ್ಟ ಇಲಾಖೆಯವರು ಇತ್ತ ಗಮನಹರಿಸಿ ಅಕ್ರಮ ಮರಳು ಸಾಗಾಣಿಕೆಯ ಟಿಪ್ಪರಗಳ ಕಡಿವಾಣಕ್ಕೆ ಮುಂದಾಗಬೇಕೆಂದು ಜನ ಸಂಗ್ರಾಮ ಪರಿಷತ್ ಮುಖಂಡರಾದ ಬಸವರಾಜಗೌಡ ನಗರಗುಂಡ ಅವರ ಒತ್ತಾಯವಾಗಿದೆ.