ಟಿಕೆಟ್ ಸಿಗದಿದ್ದರು ಸ್ಫರ್ಧೆ ಖಚಿತ-ವಿಜಯಕುಮಾರ್

ಮಾಲೂರು,ಏ.೧೧.ಬಿ.ಜೆ.ಪಿ ಪಕ್ಷದ ಸಕ್ರಿಯ ಕಾರ್ಯಕರ್ತ ನಾಗಿ ಮಾಲೂರು ವಿಧಾನ ಸಭಾ ಕ್ಷೇತ್ರದಲ್ಲಿ ನಾಲ್ಕುವರೆ ವರ್ಷಗಳಿಂದ ಸಮಾಜ ಸೇವೆ ಮಾಡುವ ಮೂಲಕ ಪಕ್ಷ ಸಂಘಟನೆ ಮಾಡುವ ಕೆಲಸದಲ್ಲಿ ತೊಡಗಿದ್ದು ಪಕ್ಷದ ವರಿಷ್ಟರು ಟಿಕೆಟ್ ನೀಡದಿದ್ದಲ್ಲಿ ಕಾರ್ಯಕರ್ತರ ಮತ್ತು ಮುಖಂಡರ ತೀರ್ಮಾನದಂತೆ ಚುನಾವಣೆಗೆ ಸ್ಪರ್ದಿಸುವುದಾಗಿ ಬಿ.ಜೆ.ಪಿ.ಪಕ್ಷದ ರಾಜ್ಯ ಫಲಾನುಭವಿಗಳ ಪ್ರಕೋಷ್ಠ ಸಮಿತಿಯ ಸದಸ್ಯ ವಿಧಾನಸಭಾ ಟಿಕೆಟ್ ಆಕಾಂಕ್ಷಿ ಹೂಡಿ ವಿಜಯಕುಮಾರ್ ತಿಳಿಸಿದರು.
ಪಟ್ಟಣದ ವೈಟ್ ಗಾರ್ಡನ್ ಬಡಾವಣೆ ಯಲ್ಲಿರುವ ಶ್ರೀ ಮೋದಿ ನಿವಾಸದ ಆವರಣದಲ್ಲಿ ಬೆಂಬಲಿಗ ಕಾರ್ಯಕರ್ತ ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತಾಡಿದ ಅವರು
ತಾಲೂಕಿನಲ್ಲಿ ನಿರಂತರವಾಗಿ ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗುವ ಮೂಲಕ ನಾಲ್ಕೂವರೆ ವರ್ಷದಿಂದ ಬಿ.ಜೆ.ಪಿ ಪಕ್ಷ ಕಟ್ಟುವ ಕೆಲಸ ಮಾಡುವುದರೊಂದಿಗೆ ಜನ ಸೇವೆ ಮಾಡುತ್ತಿರುವ ನನಗೆ ಪಕ್ಷ ಗುರುತಿಸಿ ಟಿಕೆಟ್ ನೀಡದ್ದಿದ್ದರೆ ಸ್ವಾಭಿಮಾನದಿಂದ ಚುನಾವಣೆಯನ್ನು ಎದರುಸುವುದಾಗಿ ತಿಳಿಸಿದರು.
ಸಭೆಯಲ್ಲಿ ಪಕ್ಷದ ಹಿರಿಯ ಮುಖಂಡ ಹನುಮಪ್ಪ ಮಾತನಾಡಿ ವಿಜಕುಮಾರ್ ಗೆಲ್ಲಿಸುವ ಮೂಲಕ ಮಾಲೂರು ತಾಲ್ಲೂಕು ಮಾದರಿ ತಾಲ್ಲೂಕು ಮಾಡೋಣವೆಂದರು. ಮುಖಂಡ ಪ್ರಭಾಕರ್ ಮಾತನಾಡಿ ನಾವು ಹೂಡಿ ವಿಜಯಕುಮಾರ್ ರವರನ್ನು ಬೆಂಬಲಿಸೋಣ ಎಂದು ತಿಳಿಸಿದರು.
ಪಕ್ಷದ ಮುಖಂಡ ರಾಜಾರಾಂ ಮಾತನಾಡಿ. ಒಂದು ಪಕ್ಷದಲ್ಲಿ ನಮಗೆ ಅನ್ಯಾಯ ಆದರೆ ತಾಲ್ಲೂಕಿನ ಜನತೆ ಪಕ್ಷದ ಕಾರ್ಯಕರ್ತರು ಚಾಲೆಂಜ್ ಆಗಿ ತೆಗೆದುಕೊಳ್ಳ ಬೇಕೆಂದರು.
ಹಲವಾರು ಮುಖಂಡರುಗಳು ಸಭೆಯಲ್ಲಿ ಮಾತನಾಡಿ ಪಕ್ಷ ಬೇರೆಯವರಿಗೆ ಟಿಕೆಟ್ ನೀಡಿದರೆ ಸೋಲುವುದು ಗ್ಯಾರೆಂಟಿ.ಹೂಡಿ ವಿಜಯಕುಮಾರ್ ಬಿ.ಜೆ.ಪಿ ಯಲ್ಲಿ ಇದ್ದರೆ ಮಾತ್ರ ನಾವು ಪಕ್ಷದಲ್ಲಿ ಇರುತ್ತೇವೆ ಇಲ್ಲವೆ ಪಕ್ಷ ಬಿಡುವುದು ಶಥಸಿದ್ದ.ಮೋದಿ ಅಭಿಮಾನಿಗೆ ಟಿಕೆಟ್ ನೀಡದ ಪಕ್ಷ ಬೇಕಾಗಿಲ್ಲ.ಪಕ್ಷ ಟಿಕೆಟ್ ನೀಡಲಿ ನೀಡದಿರಲಿ ನಮ್ಮ ಹೋರಾಟ ಚುನಾವಣೆಯಲ್ಲಿ ಗೆದ್ದು ಹೂಡಿ ವಿಜಯಕುಮಾರ್ ರವರನ್ನು ಶಾಸಕರನ್ನಾಗಿ ಮಾಡುವುದು ನಮ್ಮ ಗುರಿ ಎಂದು ಅಭಿಪ್ರಾಯಗಳನ್ನು ತಿಳಿಸಿದರು.
ಶ್ವೇತ ಹೂಡಿ ವಿಜಯಕುಮಾರ್ ಮಾತನಾಡಿ ಕಾರ್ಯಕರ್ತರು ಹುಮ್ಮಸ್ಸು ನಮಗೆ ಬೆಂಬಲ,ಕಾರ್ಯಕರ್ತರ ನಿರ್ಧಾರಕ್ಕೆ ಹೂಡಿ ವಿಜಯಕುಮಾರ್ ಬದ್ದರಾಗಿರುತ್ತಾರೆ.ಜನತೆಯ ಮೇಲೆ ಭರವಸೆ ಇದೆ.ದೇವರು ನಮ್ಮೊಟ್ಟಿಗೆ ಇದ್ದಾರೆ ಎಂದು ಭಾವಿಸುತ್ತೇನೆಂದು ಸಭೆಗೆ ತಿಳಿಸಿದರು.
ಈ ಸಂದರ್ಭದಲ್ಲಿ ರಾಜಾರಾಮ್ ದೇವರಾಜ್ ರೆಡ್ಡಿ ಪಿ ನಾರಾಯಣಸ್ವಾಮಿ ವೆಂಕಟೇಶ್ ಗೌಡ ಗೋಪಾಲ್ ಗೌಡ ರಾಮಮೂರ್ತಿ ಭಾನುತೇಜ ನಾರಾಯಣಗೌಡ ಚಂದ್ರಪ್ಪ ಅಂಬರೀಷ್ ರೆಡ್ಡಿ ಮೋಹನ್ ಬಾಬು ರಘು ಬಿ ಆರ್ ವೆಂಕಟೇಶ್ ಅಮರಾವತಿ ಶ್ರೀವಳ್ಳಿ ಸುಮ ಮಂಜುನಾಥ್ ತಿಮ್ಮನಾಯಕನಹಳ್ಳಿ ನಾರಾಯಣಸ್ವಾಮಿ ರಾಮೇಗೌಡ ಬೋರ್ ಮಂಜು ಕುರಿ ಮಂಜು ಹುಂಗೇನಹಳ್ಳಿ ವೆಂಕಟೇಶ್ ಇನ್ನಿತರರು ಇದ್ದರು.