ಟಿಕೆಟ್ ಸಿಕ್ಕವರಿಗೆ ಬೆಂಬಲ:ಕಾರ್ತಿಕ್

ಬಳ್ಳಾರಿ,ಫೆ.೨೧-ಈ ಮೊದಲು ಸಂಡೂರು ಕ್ಷೇತ್ರ ಕಾಂಗ್ರೆಸ್ ನ ಭದ್ರಕೋಟೆಯಾಗಿತ್ತು. ಆದರೆ ಇಂದು ಬೇರೆಯವರ ಕೈಗೆ ಸಿಕ್ಕು ಹಾಳಾಗಿದೆ. ಅದಕ್ಕಾಗಿ ಬಿಜೆಪಿಯನ್ನು ಗೆಲ್ಲಿಸಲು ಎಲ್ಲಾ ರೀತಿ ಸಿದ್ದತೆ ಆಗಿದೆ. ದೆಹಲಿಯಿಂದ ಟಿಕೆಟ್ ತಂದವರಿಗೆ ನನ್ನ ಬೆಂಬಲ ಎಂದು ಕಾರ್ತಿಕ್ ಘೋರ್ಪಡೆ ಹೇಳಿದರು ಅವರಿಂದು ಸಂಡೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕ್ಷೇತ್ರದ ಜನರಿಗೆ ಕುಡಿಯುವ ನೀರಿಲ್ಲ, ಇದೇನಾ ಕಾಂಗ್ರೆಸ್ ಮಾಡಿದ ಅಭಿವೃದ್ಧಿ, ಸ್ವಾಭಿಮಾನದ ಜೀವನವೇ ಇಲ್ಲದಂತಾಗಿದೆ. ರಾಜ್ಯದಲ್ಲಿ ಅತಿ ಹೆಚ್ಚು ತೆರಿಗೆ ಕಟ್ಟುವ ವಿಧಾನ ಸಭಾ ಕ್ಷೇತ್ರ ಇದಾಗಿದೆ. ಹೀಗಿದ್ದರೂ ಇಂತಹ ಪರಿಸ್ಥಿತಿ ಇದೆ. ಅದಕ್ಕಾಗಿ ಈಗ ಕ್ಷೇತ್ರದ ೭೦ ಕೆರೆಗಳಿಗೆ ತುಂಗಭದ್ರ ಡ್ಯಾಂನಿಂದ ನೀರು ತುಂಬಿಸಲು ನಾವು ಮಾಡಿದ ಮನವಿಗೆ ಈಗಿನ ಬಿಜೆಪಿ ಸರ್ಕಾರ ಡಿಪಿಆರ್ ಸಿಧದಪಡಿಸಿದ್ದು. ಯೋಜನೆ ಅನುಷ್ಟಾನಕ್ಕೆ ಅನುಮೋದನೆ ನೀಡಿದೆ.
ಹಾಗಾಗಿ ಈ ಬಾರಿ ಕ್ಷೇತ್ರದ ಜನತೆ ಬದಲಾವಣೆ ಮಾಡಿ ಎಂದು ಹೇಳಿದರು.
ಅಮಿತ್ ಷಾ ಅವರು ನಮ್ಮನೆಗೆ ಕರೆದುಕೊಂಡು ಹೋಗಲು ಸಹ ರಸ್ತೆ ಇಲ್ಲದಾಗಿದೆ ಅದಕ್ಕಾಗಿ ಕಾಂಗ್ರೆಸ್‌ನ ಭದ್ರ ಬುನಾದಿಯನ್ನು ಸಂಪೂರ್ಣ ಕಿತ್ತು ಹಾಕಲು ಬಯಸಿದೆ. ಇಲ್ಲಿ ಬಿಜೆಪಿಯೇ ಇರಲಿಲ್ಲ. ೨೦೧೮ ರಲ್ಲಿ ದೆಹಲಿಯಲ್ಲಿಯೇ ಕೂತು ಇದೇ ಅಮಿತ್ ಷಾ ಅವರು ಬಿಜೆಪಿಗೆ ಮಹತ್ವ ಕೊಟ್ಟರು. ಇದರಿಂದ ಅಂದು ಅಭ್ಯರ್ಥಿ ಸೋತರೂ ನಂತರ ಲೋಕಸಭೆ, ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷ ಯಶಸ್ಸು ದೊರೆತಿದೆ. ಹೀಗಾಗಿ ಈ ಬಾರಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಕಳೆದ ಬಾರಿ ಬಂಡಾಯ ನಮ್ಮ ಅಭ್ಯರ್ಥಿ ಸೋಲಿಗೆ ಕಾರಣ ಆಯ್ತು. ಈ ಬಾರಿ ಹಾಗೆ ಆಗಲ್ಲ. ಬಂಡಾಯ ಹೇಳದಂತೆ ಮಾಡಲಿದೆ. ದೆಹಲಿ ನಾಯಕರು ಟಿಜೆಟ್ ತೀರ್ಮಾನಿಸುತ್ತಾರೆ. ಟಿಕೆಟ್ ಬಂದವರನ್ನು ಗೆಲಿಸುವುದು ನಮ್ಮ ಕರ್ತವ್ಯ ಎಂದರು. ನಿಮ್ಮ ಬೆಂಬಲ ಯಾರಿಗೆ ಎಂದಾಗ ಜಿಲ್ಲೆ ಎಲ್ಲರಿಗೂ ಎಂದು ನಕ್ಕರು.