ಟಿಕೆಟ್ ರಹಿತ ಪ್ರಯಾಣ: 1,33,786 ರೂ.ಗಳ ದಂಡ ವಸೂಲಿ

ಕಲಬುರಗಿ.ಮಾ.23:ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ ಬರುವ 9 ವಿಭಾಗಗಳಲ್ಲಿ ಫೆಬ್ರುವರಿ 2021 ರ ಮಾಹೆಯಲ್ಲಿ ಬಸ್‍ಗಳನ್ನು ತನಿಖೆ ನಡೆಸಿ ಒಟ್ಟು 830 ಟಿಕೆಟ್ ರಹಿತ ಪ್ರಯಾಣಿಕರಿಂದ 1,33,786 ರೂ.ಗಳ ದಂಡದ ಮೊತ್ತವನ್ನು ವಸೂಲಿ ಮಾಡಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕೂರ್ಮರಾವ್ ಎಂ. ಅವರು ತಿಳಿಸಿದ್ದಾರೆ.
ಕಾರಣ ಪ್ರಯಾಣಿಕರು ಬಸ್‍ನಲ್ಲಿ ಪ್ರಯಾಣಿಸುವಾಗ ಅಧಿಕೃತವಾಗಿ ಟಿಕೆಟ್ ಅಥವಾ ಪಾಸ್‍ನ್ನು ಪಡೆದು ಪ್ರಯಾಣಿಸಬೇಕೆಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.