ಟಿಕೆಟ್ ನಿರೀಕ್ಷೆಯಲ್ಲಿ ಬರ್ಜರಿ ಪ್ರಚಾರ ಮಾಡಿದ ಮಾನಪ್ಪ ಡಿ ವಜ್ಜಲ್

ಮುದಗಲ್ಲ : ವಿಧಾನಸಭೆ ಚುನಾವಣೆಯ ಕಾವು ರಂಗೇರಿದೆ ಅತ್ತ ಲಿಂಗಸೂರು ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯ ಅಭ್ಯರ್ಥಿ ಹೆಸರು ಇನ್ನೂ ಘೋಷಿಸದೆ
ಅಳೆದು-ತೂಗುತ್ತಿದ್ದರೆ, ಇತ್ತ ಬಿಜೆಪಿ ಯ ಆಕಾಂಕ್ಷಿಯ ಅಭ್ಯರ್ಥಿ ಮಾನಪ್ಪ ಡಿ ವಜ್ಜಲ್ ಆವರು ಅಧಿಕೃತ ಪ್ರಕಟಣೆಗಾಗಿ ಕಾಯದೆ, ತಮ್ಮ ಲಿಂಗಸೂರು ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮುದಗಲ್ಲ ಪಟ್ಟಣದ ಹಳ್ಳಿ ಗಳಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ ಬಿಜೆಪಿಯ ಲಿಂಗಸೂರು ಮಾಜಿ ಶಾಸಕರಾದ ಮಾನಪ್ಪ ಡಿ ವಜ್ಜಲ್ ಅವರು ಮತಬೇಟೆ ನಡೆಸುತ್ತಿದ್ದಾರೆ

ಮುದಗಲ್ಲ ಸಮೀಪದ ಹಳ್ಳಿಗಳಗೆ ಭೇಟಿ ನೀಡುತ್ತಿರುವ ಅವರು ನೇರವಾಗಿ ಮತದಾರ ರನ್ನು ಭೇಟಿ ಯಾಗುತ್ತಿದ್ದಾರೆ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.

ಪ್ರಚಾರದ ನಿಮಿತ್ಯ ಇಂದು ಕನ್ನಾಪೂರಹಟ್ಟಿ, ಆಮದಿಹಾಳ, ಚಿಕ್ಕ ಯರದಿಹಾಳ, ಹಿರೇ ಯರದಿಹಾಳ, ಆದಾಪೂರ, ನಂದಿಹಾಳ ಹಾಗೂ ಕಿಲ್ಲಾರಹಟ್ಟಿಯಲ್ಲಿ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿಯ ಲಿಂಗಸೂರು ತಾಲೂಕು ಮಂಡಲ ಅಧ್ಯಕ್ಷರಾದ ಶ್ರೀ ವೀರನಗೌಡ ,ಮುದಗಲ್ಲ ಮಂಡಳ ಅಧ್ಯಕ್ಷ ರಾದ ಸಣ್ಣ ಸಿದ್ದಯ್ಯ, ಹನುಮಂತಪ್ಪ ಕಂದಗಲ್ , ನಾಗರಿಕ ತಳವಾರ , ಕರಿಯಪ್ಪ ಯಾದವ್ ರಫಿ ಟಮೋಟೊ ಹಾಗೂ ಊರಿನ ಗ್ರಾಮಸ್ಥರು ಸೇರಿದಂತೆ ಪಕ್ಷದ ಅನೇಕ ಮುಖಂಡರು ಉಪಸ್ಥಿತರಿದ್ದರು…