ಟಿಕೆಟ್ ನಿರಾಕರಣೆ: ಗಳ ಗಳನೆ ಅತ್ತ ಬಿಎಸ್ ಪಿ ಮುಖಂಡ

ಲಕ್ನೋ,ಜ.14- ವಿಧಾನಸಭೆ ಚುನಾಣೆಯಲ್ಲಿ ಸ್ಪರ್ದೆ ಮಾಡಲು ಟಿಕೆಟ್ ಸಿಗದ ಹಿನ್ನೆಕೆಯಲ್ಲಿ ಬಿಎಸ್ ಪಿ ಮುಖಂಡನೋರ್ವ ಗಳಗಳನೇ ಅತ್ತು ಕಣ್ಣೀರು ಹಾಕಿರುವ ಘಟನೆ ನಡೆದಿದೆ.

ಬಿಎಸ್ ಪಿ ಮುಖಂಡ ಹರ್ಷದ್ ರಾಣಾ ಈ ಬಾರಿ ಚುನಾವಣೆಯಲ್ಲಿ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂದು ಎಲ್ಲಾ ತಯಾರಿ ಮಾಡಿಕೊಂಡಿದ್ದರು‌.ಟಿಕೆಟ್ ಸಿಗುವ ಖಾತೆಯ ಹಿನ್ನೆಲೆಯಲ್ಲಿ ಚುನಾವಣೆಯ ಪ್ರಚಾರವನ್ನು ನಡೆಸಿದ್ದರು.

ಬಹುಜನ ಸಮಾಜವಾದಿ ಪಕ್ಷದ ಅಧ್ಯಕ್ಷ ಮಾಯಾವತಿ ಅವರು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ ಮಾಹಿತಿ ತಿಳಿಯುತ್ತಿದ್ದಂತೆ ಸುದ್ದಿಗಾರರ ಮುಂದೆ ಗಳಗಳನೆ ಕಣ್ಣೀರ ಕೋಡಿ ಹರಿಸಿದರು.

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆ ಇಂದಿನಿಂದ ಆರಂಭ ವಾಗಿದೆ ಇದರ ನಡುವೆ ಹಲವು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಿದೆ.

ಪಕ್ಷಾಂತರ ಪರ್ವ:

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದಿಂದ ಸಚಿವರು ಶಾಸಕರ ಪಕ್ಷಾಂತರ ಪರ್ವ ಮುಂದುವರೆದಿದೆ

ಈಗಾಗಲೇ ಹತ್ತಕ್ಕೂ ಹೆಚ್ಚು ಬಿಜೆಪಿ ಶಾಸಕರು ಹಲವು ಸಚಿವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಅಸಹನೆಯ ವ್ಯಕ್ತಪಡಿಸಿ ಬಿಜೆಪಿಗೆ ಗುಡ್ ಬೈ ಹೇಳಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.