ಟಿಕೆಟ್ ತಪ್ಪಿಸುವ ಹುನ್ನಾರ

ಆನೇಕಲ್. ಏ. ೦೩ – ಬಿಜೆಪಿ ಪಕ್ಷವನ್ನು ಕೆಟ್ಟದಾಗಿ ಬಿಂಬಿಸಲು ಮತ್ತು ನನಗೆ ಆನೇಕಲ್ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಲ್ಲಿ ಟಿಕೆಟ್ ಅನ್ನು ತಪ್ಪಿಸುವ ಉದ್ದೇಶದಿಂದ ವಿರೋಧಿಗಳು ಮೈಸೂರಿನಲ್ಲಿರುವ ಖಾಸಗಿ ದಿನ ಪತ್ರಿಕೆಯಲ್ಲಿ ಯಾರೋ ಕೊಟ್ಟಿರುವ ಹೇಳಿಕೆಗೆ ನನ್ನ ಪೋಟೋವನ್ನು ಬಳಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು ಆನೇಕಲ್ ಕ್ಷೇತ್ರದ ಜನತೆ ಇಂತಹ ಸುಳ್ಳು ಸುದ್ದಿಗೆ ಯಾರೂ ಕಿವಿಗೊಡಬೇಡಿ ಎಂದು ನಿವೃತ್ತ ಐಎಎಸ್ ಅದಿಕಾರಿ ಕೆ.ಶಿವರಾಮ್ ರವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಸಂಬಂದ ಈಗಾಗಲೇ ಪೋಲಿಸ್ ಠಾಣೆಗೆ ದೂರು ಸಹ ನೀಡಲಾಗಿದೆ ಎಂದರು. ಕಳೆದ ೧೦ ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ ಜೊತೆಗೆ ಆನೇಕಲ್ ಕ್ಷೇತ್ರದಲ್ಲಿಯೂ ಸಹ ಬೂತ್ ಮಟ್ಟದಲ್ಲಿ ಬಿಜೆಪಿ ಪಕ್ಷದ ಸಂಘಟನೆ ಮಾಡಲು ಮುಂದಾಗಿದ್ದು ಈಗಾಗಲೇ ನನ್ನ ಸಮುದಾಯ ಜನರು ಸಹ ಬಿಜೆಪಿ ಕಡೆಗೆ ಬರುತ್ತಿದ್ದು ಇದನ್ನು ಅರಿತ ಕೆಲವು ವಿರೋದಿಗಳು ನನ್ನ ವರ್ಚಸ್ಸನ್ನು ಕುಗ್ಗಿಸಲು, ಮೈಸೂರಿನಲ್ಲಿ ಕೆ.ಎಸ್.ಶಿವರಾಮ್ ಎಂಬುವರು ಬಿಜೆಪಿ ವಿರುದ್ದ ಕೊಟ್ಟ ಹೇಳಿಕೆಗೆ ನನ್ನ ಬಾವಚಿತ್ರವನ್ನು ಬಳಸಿ ನನಗೆ ಮತ್ತು ಪಕ್ಷಕ್ಕೆ ತೇಜೋವದೆ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಳೆದ ೬೫ ವರ್ಷಗಳ ಕಾಲ ಆಡಳಿತ ನಡೆಸಿರುವ ಕಾಂಗ್ರೆಸ್ ಪಕ್ಷ ಮೀಸಲಾತಿ ಹೆಚ್ಚಳ ಬಗ್ಗೆ ಚಕಾರು ಎತ್ತಲಿಲ್ಲ ಆದರೆ ರಾಜ್ಯ ಬಿಜೆಪಿ ಸರ್ಕಾರ ಮೀಸಲಾತಿಯನ್ನು ಹೆಚ್ಚಳಗೊಳಿಸುವ ಮೂಲಕ ಒಂದು ದಿಟ್ಟ ನಿರ್ಧಾರವನ್ನು ತೆಗೆದು ಕೊಂಡಿದ್ದು ರಾಜ್ಯದ ಜನತೆ ಮೇ ೧೦ ರಂದು ನಡೆಯುವ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಬೆಂಬಲಿಸುವ ಮೂಲಕ ರಾಜ್ಯದ ಅಭಿವೃದ್ದಿಗೆ ಕೈಜೋಡಿಸಿ ಎಂದು ಹೇಳಿದರು.