
ಸಿರವಾರ,ಆ.೨೨- ಪಟ್ಟಣದ ನೀರಾವರಿ ಇಲಾಖೆಯ ಆವರಣದಲ್ಲಿ ಮಂಗಳವಾರ ಸೇರಿದ ಸಾವಿರಾರು ರೈತರು ತುಂಗಭದ್ರಾ ಎಡದಂಡೆ ಕಾಲುವೆಯ ಕೆಳಭಾಗಕ್ಕೆ ನೀರಿನ ಗೇಜ್ ನಿರ್ವಹಿಸುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಸಿದರು.
ಹಲವಾರು ವರ್ಷಗಳಿಂದಲೂ ತುಂಗಭದ್ರಾ ಎಡದಂಡೆಯ ಕೆಳಭಾಗದ ಕಾಲುವೆಗೆ ಸಮರ್ಪಕವಾಗಿ ನೀರು ಒದಗಿಸದೇ ಅನ್ಯಾಯ ಮಾಡಲಾಗುತ್ತಿದೆ. ಮೇಲ್ಭಾಗದ ಅಕ್ರಮ ನೀರಾವರಿ, ರಾಜಕೀಯ ಮುಖಂಡರ ಹಿತಾಸಕ್ತಿಯ ಕೊರತೆಯಿಂದ ರೈತ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ಕೆಳಭಾಗದ ನೀರಿನ ಸಮಸ್ಯೆಗೆ ಶಾಶ್ವತವಾದ ಪರಿಹಾರ ಒದಗಿಸುವ ವರೆಗೆ ಈ ಹೋರಾಟ, ಪ್ರತಿಭಟನೆ ಯಿಂದ ದೂರ ಸರಿಯುವ ಮಾತೇ ಇಲ್ಲ ಎಂದು ಒಕ್ಕೊರಲಿನ ಧ್ವನಿಯಿಂದ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಮೈಲ್ ಸಂಖ್ಯೆ ೬೯ ರಲ್ಲಿ ೧ ಫೀಟ್ ನೀರಿನ ತಪ್ಪು ಗೇಜ್ ನ ಬರಹ ಸರಿಪಡಿಸಬೇಕು. ಅಲ್ಲಿ ೧ ಅಡಿ ನೀರು ಕಡಿಮೆಯಾದರೆ ಸುಮಾರು೪೫೦ ಕ್ಯೂಸೆಕ್ಸ್ ನೀರು ಕಡಿಮೆಯಾಗುತ್ತದೆ ಎಂದು ರೈತ ಮುಖಂಡ ಆರ್ ಎಸ್ ಪಾಟೀಲ್ ನಾಗಡದಿನ್ನಿ ದೂರಿದರು.
ರಾಜ್ಯ ರೈತ ಸಂಘದ ಮುಖಂಡ ಚಾಮರಸ ಮಾಲಿ ಪಾಟೀಲ್, ರಾಜ್ಯ ರೈತ ಸಂಘದ ಉಪಾಧ್ಯಕ್ಷ ಅಮರೇಶ ಪನ್ನೂರ ಚಾಗಭಾವಿ, ಮಾಜಿ ಶಾಸಕ ಗಂಗಾಧರ ನಾಯಕ, ಶಂಕರಗೌಡ ಹರವಿ, ಜೆ.ಶರಣಪ್ಪಗೌಡ, ಚುಕ್ಕಿ ಸೂಗಪ್ಪ ಸಾಹುಕಾರ, ಸಿದ್ಧಲಿಂಗಪ್ಪ ಗೌಡ ನಾಗಡದಿನ್ನಿ, ಮಾತನಾಡಿದರು. ನೀರಿನ ವಿಫಲ ನಿರ್ವಹಣೆಗಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಜಿ.ಲೋಕರಡ್ಡಿ, ಟಿ ಆರ್ ಪಾಟೀಲ್, ಜೆ. ದೇವರಾಜ ಗೌಡ, ರೈತ ಸಂಘದ ಅನಿತಾ ಮಂತ್ರಿ,ಶರಣಪ್ಪಗೌಡ ಹಳ್ಳಿ ಹೊಸೂರ, ಜೆ.ಉಮಾಪತಿ ಗೌಡ, ಚಂದ್ರಶೇಖರಯ್ಯ ಸ್ವಾಮಿ, ಆರ್ ಎಸ್ ಪಾಟೀಲ್, ಉದಯಕುಮಾರ ಚಾಗಭಾವಿ, ವೈ ಬಸನಗೌಡ, ಅರಿಕೇರಿ ಮಲ್ಲಿಕಾರ್ಜುನ ಸಾಹುಕಾರ,ಎಂ.ನಾಗರಾಜ ಗೌಡ, ಎಸ್ ದಾನನಗೌಡ, ಸಿದ್ಧಲಿಂಗಪ್ಪ ಗೌಡ ನಾಗಡದಿನ್ನಿ, ನರಸಿಂಹರಾವ್ ಕುಲಕರ್ಣಿ, ಎಂ.ನಿಂಬೆಯ್ಯ ಸ್ವಾಮಿ, ಕಲ್ಲೂರು ಬಸವರಾಜ ನಾಯಕ, ಎಸ್ ಸೂರ್ಯರಾವ್, ಎಂ ರಾಧಾಕೃಷ್ಣ, ಕೆ ಮಾರ್ಕಂಡೇಯ ಜಾಲಾಪೂರ ಕ್ಯಾಂಪ್, ವೈ ಅಮರೇಶಪ್ಪ, ವಿಜಯ ಕುಮಾರ ಗುಡ್ಡದಮನಿ, ಬಸವರಾಜ ಬಂಢಾರಿ, ಅರಳಪ್ಪ ಯದ್ದಲದಿನ್ನಿ, ಎಂ.ಪ್ರಕಾಶ, ಬೀರಪ್ಪ ಕಡದಿನ್ನಿ, ಎಲ್ ವಿ ಸುರೇಶ ಜಾಲಾಪೂರ ಕ್ಯಾಂಪ್, ಹಾಗು ಹಳ್ಳಿ ಹೊಸೂರ,ಚಾಗಭಾವಿ, ಬಲ್ಲಟಗಿ, ಗಣದಿನ್ನಿ, ಜಕ್ಕಲದಿನ್ನಿ, ಭಾಗ್ಯನಗರ ಕ್ಯಾಂಪ್, ಜಾಲಾಪೂರ ಕ್ಯಾಂಪ್, ಲಕ್ಕಂದಿನ್ನಿ, ಸೇರಿದಂತೆ ತಾಲೂಕಿನ ಗ್ರಾಮಗಳಿಂದ ಸಾವಿರಾರು ರೈತರು ಭಾಗವಹಿಸಿದ್ದರು.