ಟಿಎಪಿಸಿಎಂಎಸ್ ನೂತನ ಅಧ್ಯಕ್ಷರಾಗಿ ಡಾ. ಸಿದ್ದಪ್ಪ ಹೊಟ್ಟಿ, ಉಪಾದ್ಯಕ್ಷರಾಗಿ ಸ್ವಾಮಿದೇವ

ಯಾದಗಿರಿ.ನ.20; ತಾಲ್ಲೂಕು ಕೃಷಿ ಹುಟ್ಟುವಳಿ ಸಹಕಾರಿ ಮಾರುಕಟ್ಟೆ ಸಮಿತಿ (ಟಿಎಪಿಸಿಎಂಎಸ್) ನೂತನ ಅದ್ಯಕ್ಷರಾಗಿ ಡಾ. ಸಿದ್ದಪ್ಪ ಹೊಟ್ಟಿ ಉಪಾದ್ಯಕ್ಷರಾಗಿ ಸ್ವಾಮಿದೇವ ದಾಸನಕೇರಿ ಅವಿರೋಧವಾಗಿ ಆಯ್ಕೆಯಾದರು.
ನಗರದ ಟಿಎಪಿಸಿಎಂಎಸ್ ಆವರಣದಲ್ಲಿ ಜರುಗಿದ ಚುನಾವಣೆಯಲ್ಲಿ ತಲಾ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಉಭಯರು ಅವಿರೋಧ ಆಯ್ಕೆಯಾದರು ಹಾಗೂ 12 ಜನ ನಿರ್ದೇಶಕರು ಸಹ ಅವಿರೋಧ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಶಂಕರ ಗೋಪಾಲ ಪ್ರಕಟಿಸಿದರು.
ನೂತನ ನಿರ್ದೇಶಕರಾಗಿ ಸಂಗಮ್ಮ ಅಕ್ಕಿ, ಸವಿತಾ ಶಂಕಿನಮಠ ಕಾಳೆಬೆಳಗುಂದಿ, ಗೋವಿಂದಪ್ಪ ಠಾಣಗುಂದಿ, ಜಿ. ತಮ್ಮಣ್ಣ ಗುರುಮಠಕಲ್, ಬಸನಗೌಡ ಮಗದಂಪುರ, ಸಿದ್ರಾಮರೆಡ್ಡಿಗೌಡ ಮಾಲಿ ಪಾಟೀಲ್ ಕೌಳೂರು, ಅಯ್ಯನಗೌಡ ಕ್ಯಾಸಪನಳ್ಳಿ, ಯಲ್ಲಪ್ಪ ಭೂತ, ಮಲ್ಲಿನಾಥ ಆಯಾರಕರ್, ಗುಂಡೆರಾವ್ ಪಂಚಯತ್ರಿ, ಮಲ್ಲರೆಡ್ಡಿ ಬಂದಳ್ಳಿ, ರವೀಂದ್ರರೆಡ್ಡಿ ಗುಂಜನೂರು ಅವಿರೋಧ ಆಯ್ಕೆಯಾದರು.
ಅಭಿವೃದ್ಧಿಗೆ ಶ್ರಮ: ನೂತನವಾಗಿ ಅದ್ಯಕ್ಷರಾಗಿ ಆಯ್ಕೆಯಾದ ನಂತರ ಮಾಧ್ಯಮಗಳಿಗೆ ಮಾತನಾಡಿದ ನೂತನ ಅಧ್ಯಕ್ಷ ಡಾ. ಸಿದ್ದಪ್ಪ ಹೊಟ್ಟಿ ಸಮಿತಿಯ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ತಿಳಿಸಿದರು.
ಈ ಸಂದಭದಲ್ಲಿ ಟಿಎಪಿಸಿಎಂಎಸ್ ಸರ್ವ ಸದಸ್ಯರು ಮುಖಂಡರು ಹಾಜರಿದ್ದರು.